ಕಡಬ ತಾ.2ನೇ ತುಳು ಸಮ್ಮೇಳನ

0
8


ನ.23ರಂದು ರಾಮಕುಂಜದಲ್ಲಿ ವಿವಿಧ ಕ್ರೀಡಾಕೂಟ-ಪೂರ್ವಭಾವಿ ಸಭೆ

ರಾಮಕುಂಜ: ಪಿಂಗಾರ ತುಳುಕೂಟ ಕಾಣಿಯೂರು ಇವರ ಆಶ್ರಯದಲ್ಲಿ ಬೊಳ್ಳಿ ಬೊಲ್ಪು ತುಳುಕೂಟ ಸವಣೂರು ಇವರ ಸಹಕಾರದೊಂದಿಗೆ ಡಿ.೧೩ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಕಡಬ ತಾಲೂಕು ೨ನೇ ತುಳು ಸಮ್ಮೇಳನದ ಅಂಗವಾಗಿ ರಾಮಕುಂಜ, ಕೊಯಿಲ, ಆಲಂಕಾರು, ಪೆರಾಬೆ ಗ್ರಾ.ಪಂ.ವ್ಯಾಪ್ತಿಗೆ ಸಂಬಂಧಿಸಿದಂತೆ ನ.೨೩ರಂದು ರಾಮಕುಂಜ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವಿವಿಧ ಕ್ರೀಡಾಕೂಟ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ನ.೫ರಂದು ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ರಾಮಕುಂಜ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಆಶ್ರಯದಲ್ಲಿ ನ.೨೩ರಂದು ಬೆಳಗ್ಗೆ ೯.೩೦ರಿಂದ ವಿವಿಧ ಸ್ಪರ್ಧೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ೭ ಜನರ ಗುಂಪು ಆಟದಲ್ಲಿ ಕುಟ್ಟಿ ದೊಣ್ಣೆ, ಲಗೋರಿ, ಟೊಂಕ, ವೈಯಕ್ತಿಕ ಸ್ಪರ್ಧೆಯಲ್ಲಿ ಬೀಜ ಕುಟ್ಟುನು, ಒಂಟಿ ಕಾರ್ದ ಬಲಿಪು, ಕಲ್ಲಾಟ, ಗಾದೆ, ಎದುರುಕತೆ (ಒಗಟು), ಸಬಿ ಸವಾಲ್ (ರಸಪ್ರಶ್ನೆ) ಸ್ಪರ್ಧೆ ನಡೆಯಲಿದ್ದು ಪುರುಷರು, ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸುವ ರಾಮಕುಂಜ ಗ್ರಾಮದವರು ಸರಿತಾ -೯೦೦೮೧೫೦೮೪೩, ಪ್ರಕಾಶ್ ವಳೆಂಜ-೯೪೪೯೩೧೫೧೬೩, ಪ್ರೇಮಾ ಬಿ., ಹರೀಶ್ ಬಿ., ಕೊಯಿಲ ಗ್ರಾಮದವರು ಸುಧೀಶ್ ಪಟ್ಟೆ-೯೭೪೩೭೦೧೪೯೪, ನೀರಜ್ ರೈ ಅರುವಾರ, ಯಧುಶ್ರೀ ಆನೆಗುಂಡಿ, ಆಲಂಕಾರು ಗ್ರಾ.ಮದವರು ಶೃತಿ ಪ್ರಸಾದ್ ರೈ- ೯೮೪೫೯೪೩೦೨೪, ಧನ್ಯಶ್ರೀ ರೈ, ಪ್ರದೀಪ್ ರೈ ಮನವಳಿಕೆ, ಪೆರಾಬೆ ಗ್ರಾ.ಪಂ.ವ್ಯಾಪ್ತಿಯವರು ಚೆನ್ನಕೇಶವ ಗುತ್ತುಪಾಲು-೯೬೧೧೦೨೭೫೨೨, ಮಮತಾ ಅಂಬರಾಜೆ, ಪದ್ಮನಾಭ ಎರ್ಮಾಳ, ಹರೀಶ್ ಮುಂಡಾಳ, ಹಳೆನೇರಂಕಿ ಗ್ರಾಮದವರು ಸುಚೇತಾ-೯೬೬೩೫೮೩೭೪೯, ಜಯಶ್ರೀ, ಮಾಲತಿ ಇವರನ್ನು ಸಂಪರ್ಕಿಸುವಂತೆ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು.
ನೇತ್ರಾವತಿ ತುಳುಕೂಟದ ಅಧ್ಯಕ್ಷರಾದ ಕೆ.ಸೇಸಪ್ಪ ರೈ, ಚೆನ್ನಕೇಶವ ರೈ ಗುತ್ತುಪಾಲು, ರಾಮಕುಂಜ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಸುಚೇತಾ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗೌಡ, ಆಡಳಿತಾಧಿಕಾರಿ ಎಸ್.ಟಿ.ಆನಂದ, ವ್ಯವಸ್ಥಾಪಕ ರಮೇಶ್ ರೈ ರಾಮಜಾಲು, ಸೇವಾನಿರತೆ ಜಯಶ್ರೀ, ಶೃತಿ ರೈ ಆಲಂಕಾರು, ಶಿಕ್ಷಕರಾದ ಲೋಹಿತಾ, ಪ್ರೇಮ, ಸಂಚಿತಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸರಿತಾ ಸ್ವಾಗತಿಸಿ, ವಂದಿಸಿದರು.