ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಂಭಶ್ರೀ ಶಾಲೆಯ ವಿದ್ಯಾರ್ಥಿಗಳ ಸಾಧನೆ

0
8

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜು, ನಿಟ್ಟಡೆ, ವೇಣೂರು ಇಲ್ಲಿನ ವಿದ್ಯಾರ್ಥಿಗಳು ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾರೆ.

ಭಾವಗೀತೆ ಮತ್ತು ಜನಪದ ಗೀತೆ ಪ್ರಿಯ ಕೆ. ಎಸ್. ಪ್ರಥಮ, ಆಶುಭಾಷಣ ಚಿನ್ಮಯಿ ವಿ. ಪಿ. ಪ್ರಥಮ, ಇಂಗ್ಲಿಷ್ ಭಾಷಣ ಪ್ರಾಪ್ತಿ ದ್ವಿತೀಯ,ಜಾನಪದ ನೃತ್ಯ ಅನನ್ಯ ಮತ್ತು ತಂಡ ತೃತೀಯ ಸ್ಥಾನ. ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ. ಎಚ್., ಸಂಚಾಲಕರಾದ ಅಶ್ವಿತ್ ಕುಲಾಲ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಮಮತಾ ಶಾಂತಿ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿಯಾದ ಸುಚಿತ್ರ ಹಾಗೂ ಶಿಕ್ಷಕಿಯಾದ ಕುಮಾರಿ ಅಲಿಷ ಅವರು ಮಾರ್ಗದರ್ಶನ ನೀಡಿ ಸಹಕರಿಸಿದರು.