ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಹಬ್ಬಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ತಜಿಪದ ಬಿರುವೆರ್, ಸಜೀಪ ಮೂಡ ಆಶ್ರಯದಲ್ಲಿ ಆಯೋಜಿಸಲಾದ ‘ಸಾಮರಸ್ಯ ಸಂಗಮ – ತುಳುನಾಡ ತುಡಾರ್ ಪರ್ಬ ಗೂಡು ದೀಪ ಪಂತ 2026’ ಕಾರ್ಯಕ್ರಮವು ಸಂಜೀವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಸಜೀಪ ಬ್ರಹ್ಮಶ್ರೀ ಮೂರ್ತದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.
ಕಾರ್ಯಕ್ರಮದಲ್ಲಿ ತುಳುನಾಡಿನ ಹಬ್ಬಗಳ ಆಚರಣೆ, ಅವುಗಳ ಹಿಂದಿರುವ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಸಾಮಾಜಿಕ ಸಾಮರಸ್ಯದ ಮಹತ್ವದ ಕುರಿತು ದಯಾನಂದ ಜಿ. ಕತ್ತಲ್ಸಾರ್ ಅವರು ಸವಿಸ್ತಾರವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಸಿ. ಭಂಡಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ರಾಜ ಚಂಡತಿಮಾರ್, ಧನಲಕ್ಷ್ಮಿ ಗಟ್ಟಿ (ರಾಣಿ ಅಬ್ಬಕ್ಕ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಸದಸ್ಯೆ), ಚರಣ್ (ಆರ್ಟಿಒ ಅಧಿಕಾರಿ, ಬಂಟ್ವಾಳ), ಸಚಿನ್ ಮೆಲ್ಕರ್ (ವಿಶ್ವ ಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ), ಭರತ್ ಕುಮಾರ್ ಮಂಜನಾಡಿ (ಸಾಮರಸ್ಯ ಚಟುವಟಿಕೆ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ), ಯೂಟ್ಯೂಬರ್ ನಿತಿನ್ ಪೂಜಾರಿ ಹಾಗೂ ಕಮಲ ಮೊಂಟೇಪದವು (ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಕೊರಗ ಸಮುದಾಯದ ಅಧ್ಯಕ್ಷೆ) ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಂಕರನಾರಾಯಣ ಐತಾಳ್ ಓಣಿಬೈಲು, ಬಂಟ್ವಾಳ ನಗರಾಭಿವೃದ್ಧಿ ಅಧ್ಯಕ್ಷ ಬೇಬಿ ಕುಂದರ್, ಎಂ.ಕೆ. ಶಿವ, ಯೋಗೀಶ್ ಬೆಲ್ಚಡ, ಯಕ್ಷಗಾನ ಕಲಾವಿದ ಜಗದೀಶ ಗೌಡ, ಭಾಸ್ಕರ ದೇವಾಡಿಗ, ಶಂಕರ ಯಾನೆ ಕೋಚ ಪೂಜಾರಿ ಸಾನದ ಮನೆ, ರಮೇಶ್ ಕುಲಾರ್, ಅಶೋಕ ಗಟ್ಟಿ, ಕೇಶವ ಕುಂದರ್, ದಿನೇಶ್ ಗಾಣಿಗ, ವೆಂಕಪ್ಪ ನಾಯಕ, ದೇವದಾಸ್ ಭಂಡಾರಿ, ಸತೀಶ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

