ಕ್ರಿಕೆಟ್ ಪಂದ್ಯಾಟದಲ್ಲಿ ಕಿಂಗ್ಸ್ ಇಲೆವನ್ ಪೆರಾಜೆಗೆ ಪ್ರಥಮ ಸ್ಥಾನ

0
12

ಬಂಟ್ವಾಳ: ಪೆರಾಜೆ ಯುವಕ ಮಂಡಲ(ರಿ)ಪೆರಾಜೆ ಇದರ ವತಿಯಿಂದ ಪೆರಾಜೆ ಶಾಲಾ ಮೈದಾನದಲ್ಲಿ ಆರನೇ ವರ್ಷದ ಎಂಟು ತಂಡಗಳ ಯುವಕಮಂಡಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಜರುಗಿತು.

ಲೀಗ್ ಮಾದರಿಯ ಈ ಪಂದ್ಯಾಟದಲ್ಲಿ ಚರಣ್ ಅಂಚನ್ ಮುದಲೆಮಾರು ನೇತೃತ್ವದ ಕಿಂಗ್ಸ್ ಇಲೆವೆನ್ ಪೆರಾಜೆ ತಂಡವು ರಕ್ಷೀತ್ ಮಂಜೊಟ್ಟಿ ನೇತೃತ್ವದ ಗಣೇಶ್ ಮೆಡಿಕಲ್ ಕಬಕ ಬಾಯ್ಸ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಕಿಂಗ್ಸ್ ಇಲೆವೆನ್ ತಂಡದ ಜೀವನ್ ಸಾದಿಕುಕ್ಕು ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಲೋಹಿತ್ ಮಡಲ ಅತ್ಯುತ್ತಮ ಬೌಲರ್ ಆಗಿ ಆಯ್ಕೆಯಾದರು. ತೃತೀಯ ಸ್ಥಾನ ಲಕ್ಷ್ಮಿನರಸಿಂಹ ಕ್ರಿಕೆಟರ್ಸ್, ಚತುರ್ಥ ಬಹುಮಾನ ವಿನಾಯಕ ಪ್ರೆಂಡ್ಸ್ ಮುರುವ ಪಾಲಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ್ ಮಂಜೊಟ್ಟಿ, ಮಾಜಿ ಅದ್ಯಕ್ಷರುಗಳಾದ ಬಾಬು ಪೂಜಾರಿ ಕೊಪ್ಪಳ, ಮನೋಜ್ ಕೊಪ್ಪಳ, ಹರೀಶ್ ಪಾನೊರು, ಮೋಹನ್ ಸಾದಿಕುಕ್ಕು, ಶೇಖರ್ ಸಾದಿಕುಕ್ಕು, ಯುವಕ ಮಂಡಲದ ಕ್ರೀಡಾಧ್ಯಕ್ಷರಾದ ರಕ್ಷಿತ್ ಪಾನೊರು ಉಪಸ್ಥಿತರಿದ್ದರು. ಸಚಿನ್ ಮಂಜೊಟ್ಟಿ ಮತ್ತು ಲಕ್ಷ್ಮೀಶ ಸಾದಿಕುಕ್ಕು ಕಾರ್ಯಕ್ರಮ ನಿರ್ವಹಿಸಿದರು.