ಕಲ್ಲಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಗೋಳ್ತಮಜಲಿನ ನಿಶ್ಮ ಎ.ಪಿ. ಅವರು ಶೇ.92.25 ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.
ಗೋಳ್ತಮಜಲಿನ ಅಶೋಕ್ ಮತ್ತು ಜ್ಯೋತಿ ದಂಪತಿಯ ಪುತ್ರಿಯಾಗಿರುವ ನಿಶ್ಮ ಪ್ರಸ್ತುತ ಪುತ್ತೂರಿನ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ.), ಪುತ್ತೂರು ಇದರ ಸಹಸಂಸ್ಥೆಯಾದ ನೃತ್ಯ ಕಲ್ಪ, ಎರ್ಮೆ ಮಜಲ್ನ ನೃತ್ಯಗುರು ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ, ಮಂಗಳೂರು ಅವರ ಶಿಷ್ಯೆಯಾಗಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ನಿಶ್ಮ ಅವರ ಸಾಧನೆಗೆ ಪೋಷಕರು, ಗುರುಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

