2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಲಕ್ಷ್ಯ ಡಿ70 % ಅಂಕಗಳೊಂದಿಗೆ ತೇರ್ಗಡೆ

0
7

ಕಲ್ಲಡ್ಕ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಿದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ತಾಲೂಕು ವೀರಕಂಭ ಗ್ರಾಮದ ಲಕ್ಷ್ಯ ಡಿ ಕೇಪುಲಕೋಡಿ ಅವರು 70 ಶೇಕಡ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ.
ಕೇಪುಲಕೋಡಿ ದೀಪಕ್ ರಂಜಿತ ರವರ ಪುತ್ರಿ ಯಾಗಿರುವ ಈಕೆ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ 7 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ) ಪುತ್ತೂರು ಇದರ ಸಹ ಸಂಸ್ಥೆಯಾದ ನೃತ್ಯ ಕಲ್ಪ ಎರ್ಮೆ ಮಜಲ್ ಇಲ್ಲಿನ ನೃತ್ಯ ಗುರುಗಳಾದ ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ ಮಂಗಳೂರು ಇವರ ಶಿಷ್ಯೆ.