ಮೂಲ್ಕಿ : ದಿನಾಂಕ 04 ನವೆಂಬರ್ 2026ರಂದು ಸಂಜೆ 6:30ಕ್ಕೆ ಸ್ಥಳೀಯ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸಭಾಭವನದಲ್ಲಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ನ ಪದಾಧಿಕಾರಿಗಳ ಪ್ರಮುಖ ಸಭೆಯು ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಭೆಯಲ್ಲಿ ಸಮಾಜದ ಯುವ ನಾಯಕರು ಹಾಗೂ ಪ್ರಭಾವಿ ಮುಖಂಡರಾದ ರಾಜಶೇಖರ ಕೋಟ್ಯಾನ್ ಅವರು ಭಾಗವಹಿಸಿ, ಟ್ರಸ್ಟ್ನ ಭಾವಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳ ಕುರಿತು ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿದರು. ಅಲ್ಲದೆ, ಸಂಸ್ಥೆಯ ಮುನ್ನಡೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸದಾ ಜೊತೆಯಾಗಿ ನಿಲ್ಲುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ರಾಜಶೇಖರ ಕೋಟ್ಯಾನ್ ಅವರನ್ನು ಟ್ರಸ್ಟ್ನ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಪ್ರಮುಖ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಮುಂದಿನ ರೂಪುರೇಷೆಗಳು ಹಾಗೂ ಅತ್ಯಾವಶ್ಯಕ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸೂಚನೆ : ತಾರೀಕು 29 ನವೆಂಬರ್ 2026ರಂದು ಧರ್ಮ ಚಾವಡಿಯ ದೈವಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮವಿದ್ದು, ಎಲ್ಲರ ಉಪಸ್ಥಿತಿಯನ್ನು ಈ ಮೂಲಕ ಕೋರುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

