
ಸಂಸದ ತೇಜಸ್ವಿ ಸೂರ್ಯ ಅವರು ಯುಟಿ ಖಾದರ್ ಅವರನ್ನು ಕೊಣೆ ಮಾಡಿರುವುದು ರಾಜಕೀಯ ಅಜ್ಞಾನವೋ ಅಥವಾ ಉದ್ದೇಶಪೂರ್ವಕ ತಂತ್ರವು ತಿಳಿಯದು. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಪರಿಶೀಲಿಸುವುದು, ಸೇರ್ಪಡೆಗೊಳಿಸುವುದು, ಕೈಬಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ಕೆಲಸ. ಸಂಬಂಧಿತ ಅಧಿಕಾರಿಗಳು, ಸಿಬ್ಬಂದಿಗಳು ಉತ್ತರದಾಯಿಗಳೆ ಹೊರತು ಸಚಿವ ಯು ಟಿ ಖಾದರ್ ಅವರಲ್ಲ.
ಉಳ್ಳಾಲ ಪ್ರದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪಗಳಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿಟ್ಟು ಚುನಾವಣಾ ಆಯೋಗವನ್ನು, ಜಿಲ್ಲಾಧಿಕಾರಿಗಳನ್ನು, ಅಧಿಕಾರಿಗಳನ್ನು ಪ್ರಶ್ನಿಸ ಬೇಕೆ ಹೊರತು ಉಳ್ಳಾಲದ ಶಾಸಕ, ಮಂತ್ರಿ ಯು ಟಿ ಖಾದರ್ ಅವರನ್ನು ಅಲ್ಲ. ಯು ಟಿ ಖಾದರ್ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ಮೈಲೇಜ್ ಪಡೆಯುವ ಪ್ರಯತ್ನ ಬೇಡ. ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕು ಮುಖ್ಯವೇ ಹೊರತು ಪ್ರಚಾರ ಅಲ್ಲ. ಆರೋಪ ಮಾಡುವುದಕ್ಕೆ ಮೊದಲು ಜವಾಬ್ದಾರಿ ಯಾರದ್ದು ಎಂಬುದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಲ್ಲಿ ಓರ್ವರಾದ ಮಮತಾ ಗಟ್ಟಿ ಪತ್ರಿಕೆಗೋಷ್ಠಿಯಲ್ಲಿ ಕರೆಕೊಟ್ಟರು. ಪ್ರಜಾಪ್ರಭುತ್ವದ ಸಂಸ್ಥೆಗಳ ಜವಾಬ್ದಾರಿಯನ್ನು ರಾಜಕೀಯ ದ್ವೇಷಕ್ಕೆ ಬಲಿ ಕೊಡಬೇಡಿ ಎಂದು ಕೇಳಿಕೊಂಡರು.
ವರದಿ ರಾಯಿ ರಾಜ ಕುಮಾರ್
