ಮೂಡುಬಿದಿರೆ ಪ್ರಿಯದರ್ಶಿನಿ ಗ್ರಾಹಕ ದಿನಾಚರಣೆ

0
2

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಲಿಮಿಟೆಡ್ ಹಳೆಯಂಗಡಿಯ ಮೂಡುಬಿದಿರೆ ಶಾಖೆಯಲ್ಲಿ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕ್ರಿಸ್ಟೋಫರ್ ಮ್ಯಾಕ್ಸಿಮ್ ಡಿಸೋಜಾ ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಜನತಾ ಕೋ ಆಪರೇಟಿವ್ ಸೊಸೈಟಿ ಮೂಡಬಿದರೆ ಮತ್ತು ರೋಹಿಣಿ ಶೆಟ್ಟಿ ಕಾರ್ಯದರ್ಶಿ ಸಂಗಬೆಟ್ಟು ಗ್ರಾಮ ಪಂಚಾಯತ ರವರು ಭಾಗವಹಿಸಿದರು.

ಗ್ರಾಹಕರ ದಿನದಂದೇ ಸ್ವ-ಸಹಾಯ ಗುಂಪಿನ ಖಾತೆ ಪ್ರಾರಂಭವಾದ ಪ್ರಯುಕ್ತ, ಅತಿಥಿಗಳ ಸಮ್ಮುಖದಲ್ಲಿ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಶಾಖೆ ಸಿಬ್ಬಂದಿಯಾದ ಪ್ರಣಿತ್ ಜೈನ್ ಅವರು ಸ್ವಾಗತಿಸಿದರು ಮತ್ತು ವಿನಿತಾ ವಿಲ್ಮಾ ಡಿಸೋಜ ರವರು ಧನ್ಯವಾದ ಸಮರ್ಪಿಸಿದರು. ಶಾಖಾ ಪ್ರಬಂಧಕರಾದ ಅಭಿಷ್ಟ ಜೈನ್ ಕಾರ್ಯಕ್ರಮ ನಿರೂಪಿಸಿದರು.