ಬೆಳ್ಮಣಿನಲ್ಲಿ ಲಯನ್ಸ್ ವಲಯ ಸಮ್ಮೇಳನ

0
35

ಬೆಳ್ಮಣ್: ಲಯನ್ಸ್ ಜಿಲ್ಲೆ 317C, ಪ್ರಾಂತ್ಯ 6, ವಲಯ 2ರ ಪ್ರತಿಷ್ಠಿತ ವಲಯ ಸಮ್ಮೇಳನವು ಲಯನ್ಸ್ ಕ್ಲಬ್ ಬೆಳ್ಮಣ್‌ನ ಆತಿಥ್ಯದಲ್ಲಿ ನವೆಂಬರ್ 12ರ ಗುರುವಾರ ಸಂಜೆ 6.30ಕ್ಕೆ ಬೆಳ್ಮಣಿನ ಲಯನ್ಸ್ ಭವನದಲ್ಲಿ ಜರುಗಲಿದೆ.

ಈ ವಲಯ ವ್ಯಾಪ್ತಿಯ ಬೆಳ್ಮಣ್, ಮುಂಡ್ಕೂರು, ಕಡಂದಲೆ, ಮುದರಂಗಡಿ ಹಾಗೂ ಪಡುಬಿದ್ರೆಯ ಲಯನ್ಸ್ ಕ್ಲಬ್‌ಗಳ ಸದಸ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಸಮ್ಮೇಳನಕ್ಕೂ ಮುನ್ನ ವಲಯ ಸಲಹಾ ಸಮಿತಿ ಸಭೆಯು ವಲಯಾಧ್ಯಕ್ಷರಾದ ಪಡುಬಿದ್ರೆಯ ಜನಪ್ರಿಯ ವೈದ್ಯ ಲಯನ್ ಡಾ. ಮನೋಜ್ ಕುಮಾರ್ ಶೆಟ್ಟಿಯವರ ಆತಿಥ್ಯದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಜಿಲ್ಲಾ ಗವರ್ನರ್ ಅವರಿಗೆ ಸಲ್ಲಿಸಲಾಗುವುದು.

ತದನಂತರ ಲಯನ್ಸ್ ಕ್ಲಬ್ ಬೆಳ್ಮಣ್‌ನ ಆತಿಥ್ಯದಲ್ಲಿ ವಲಯ ಸಮ್ಮೇಳನ ಜರುಗಲಿದ್ದು, ವಲಯದ ವಿವಿಧ ಕ್ಲಬ್‌ಗಳ ಸದಸ್ಯರು ತಮ್ಮ ತಮ್ಮ ಕ್ಲಬ್‌ಗಳ ಸಾಧನೆಗಳು, ಸೇವಾ ಚಟುವಟಿಕೆಗಳು ಹಾಗೂ ಪ್ರಗತಿಯ ಪಕ್ಷಿನೋಟವನ್ನು ಸಭೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ನಾಯಕತ್ವ ತರಬೇತಿ ವಿಭಾಗದ ವತಿಯಿಂದ ಸದಸ್ಯರಿಗೆ ವಿಶೇಷ ನಾಯಕತ್ವ ತರಬೇತಿ ಕಾರ್ಯಕ್ರಮವೂ ನಡೆಯಲಿದೆ.

ಈ ಮಹತ್ವದ ಸಮ್ಮೇಳನದಲ್ಲಿ ವಲಯದ ಎಲ್ಲಾ ಲಯನ್ಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಲಯನ್ಸ್ ಕ್ಲಬ್ ಬೆಳ್ಮಣ್ ಅಧ್ಯಕ್ಷರಾದ ಲಯನ್ ಬಿ. ಎಚ್. ಶಿವರಾಮ ಆಚಾರ್ಯ, ಕಾರ್ಯದರ್ಶಿ ಲಯನ್ ಟೀನಾ ಡೇಸಾ ಹಾಗೂ ಕೋಶಾಧಿಕಾರಿ ಲಯನ್ ಗ್ರೆಗೊರಿ ನೊರೊನ್ಹಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.