ಮುದ್ರಾಡಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

0
6

ಹೆಬ್ರಿ : ಮಕ್ಕಳಿಗೆ ಪಾಠದ ಜೊತೆಗೆ ದೈಹಿಕ ವ್ಯಾಯಾಮ, ಕ್ರೀಡಾ ತರಬೇತಿಗಳು ಅತಿ ಅವಶ್ಯಕ. ಜ್ಞಾನ ಸಂಪಾದನೆಯ ಜೊತೆಗೆ ಉತ್ತಮ ಆರೋಗ್ಯವಂತರಾಗಿ ಬಾಳಬೇಕಾದರೆ ಪ್ರತಿನಿತ್ಯವೂ ಒಂದಷ್ಟು ಹೊತ್ತು ಆಟೋಟಗಳಿಗೆ ಸಮಯವನ್ನು ಮೀಸಲಿಡಿ. ಕಲಿಕೆ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿ.ಮುದ್ರಾಡಿ ಪ್ರೌಢಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

ತಾನು ಕಲಿತ ಈ ಶಾಲೆಗೆ ಸದಾ ಸಹಕಾರವನ್ನು ನೀಡಲು ಸಿದ್ದನಿದ್ದೇನೆ. ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಎಂದೂ ಮರೆಯದೆ ಉತ್ತಮ ನಾಗರಿಕರಾಗಿ ದೇಶ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಿ ಎಂದು 2003-04 ನೆ ಬ್ಯಾಚಿನ ಶಾಲೆಯ ಹಿರಿಯ ವಿದ್ಯಾರ್ಥಿ ಕತಾರ್ ನಲ್ಲಿ ಉದ್ಯೋಗಿಯಾಗಿರುವ ಸಾಫ್ಟ್ ವೇರ್ ಇಂಜಿನಿಯರ್ ಬಲ್ಲಾಡಿ ಸುಕೀರ್ತಿ ಶೆಟ್ಟಿ ಹೇಳಿದರು.

ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ 2026-27 ನೆ ಸಾಲಿನ ವಾರ್ಷಿಕ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಹಳೆ ವಿದ್ಯಾರ್ಥಿ ಸಂಫದ ಅಧ್ಯಕ್ಷರಾದ ಅಶೋಕ್ ಪೂಜಾರಿ,ರಕ್ಷಕ ಶಿಕ್ಷಕ ಸಮಿತಿ ಸದಸ್ಯರಾದ ಸುಮತಿ ಮತ್ತು ಲಲಿತಾ, ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್ ಹೆಬ್ಬಾರ್ ಉಪಸ್ಥಿತರಿದ್ದರು.ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸಿದ ಸುಕೀರ್ತಿ ಶೆಟ್ಟಿ ಇವರನ್ನು ಗೌರವಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಮಹೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕರಾದ ಪಿ. ವಿ. ಆನಂದ, ಶ್ಯಾಮಲಾ, ಅನುಷಾ ಹಾಗೂ ಶಿಕ್ಷಕೇತರ ಸಿಬ್ಬಂದಿ ಮಹೇಶ್ ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಸಹಿತ ಪದಕ ಪ್ರಧಾನ ಮಾಡಲಾಯಿತು.