
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯಶ್ರೀ ಗುಡಿ ಎದುರಿನ ರಸ್ತೆ ಬದಿ ರಿಕ್ಷಾ ತಂಗುದಾಣ ನಿರ್ಮಿಸಿ ಕೊಡುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ರಿಕ್ಷಾ ಚಾಲಕರು ಬುಧವಾರ ಮನವಿ ಸಲ್ಲಿಸಿದರು.
ಪ್ರಮುಖರಾದ ಮಮತಾ ಎಸ್. ಗಟ್ಟಿ, ಉಮೇಶ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರವೀಂದ್ರ ಸಪಲ್ಯ, ನವೀನ್ ಬಂಗೇರ ಬೋಳಂತೂರು, ಅರುಣ್, ಪ್ರಕಾಶ್, ಸತೀಶ ಪೂಜಾರಿ ಮತ್ತಿತರರು ಇದ್ದರು.
