
ಆಶ್ಲೇಷ ಬಲಿ ಹೋಮ, ವಟು ಆರಾಧನೆ ಹಾಗೂ ಅನ್ನದಾನ ಕಾರ್ಯಕ್ರಮ
ಸಜಿಪನಡು ಶ್ರೀ ಕ್ಷೇತ್ರದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ, ಆಶ್ಲೇಷ ಬಲಿ ಹೋಮ, ವಟು ಆರಾಧನೆ ಹಾಗೂ ಅನ್ನದಾನ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜಾ ಸೇವೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕರಾದ ಗಣಪತಿ, ಮಹಾಬಲೇಶ್ವರ ಭಟ್, ಜಿ. ರಾಮಕೃಷ್ಣ ಭಟ್, ಗೋಪಾಲಕೃಷ್ಣ ಭಟ್, ಕೆ. ರಾಧಾಕೃಷ್ಣ ಆಳ್ವ, ಕಿಶನ್ ಸೇಣವ, ಸೋಮನಾಥ ಭಂಡಾರಿ, ರಾಮ ಬರೆ, ಸುಭಾಷ್ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೋಚಪೂಜಾರಿ, ಕುಂಞ ಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
