ಮಕ್ಕಳ ನಗುವೇ ಮನೆಯ ಸಂತೋಷ, ಕನಸುಗಳೇ ನಾಳೆಯ ಬೆಳಕು : ನಕ್ರೆ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0
7

ನಕ್ರೆ: ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನಲ್ ಟ್ರಸ್ಟ್ (ರಿ.) ನಕ್ರೆ ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14ರ ಶನಿವಾರ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೆಕ್ಕಪರಿಶೋಧಕರಾದ ಕಮಲಾಕ್ಷ ಕಾಮತ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಮೌಲ್ಯಗಳ ಮಹತ್ವದ ಕುರಿತು ವಿಚಾರಗಳನ್ನು ಹಂಚಿಕೊಂಡರು.

“ಮಕ್ಕಳೇ ನಗುವೇ ಮನೆಯ ಸಂತೋಷ, ಅವರ ಕನಸುಗಳೇ ನಾಳೆಯ ಬೆಳಕು” ಎಂಬ ವಿಚಾರಧಾರೆಯೊಂದಿಗೆ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಕನಸುಗಳು, ಗುರಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನಲ್ ಟ್ರಸ್ಟ್ (ರಿ.) ನಕ್ರೆ ಇದರ ಸಂಚಾಲಕರಾದ ಪ್ರಕಾಶ್ ಹೆಗ್ಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ, ಮುಖ್ಯ ಶಿಕ್ಷಕಿ ಪ್ರೀತಿವಾತ್ಸಲ್ಯ, ಸಹಶಿಕ್ಷಕರಾದ ಶಂಕರ ಪೂಜಾರಿ, ಶಶಿಮಣಿ, ಲವೀಟ ಮತ್ತು ವರ್ಷಿಣಿ ಉಪಸ್ಥಿತರಿದ್ದರು.

ಅಡ್ಡಾಲು ಅಂಗನವಾಡಿ ಕೇಂದ್ರದ ಪುಟಾಣಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಮತ್ತು ಸಹಾಯಕಿ ಜೇಸಿಂತ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಸಿಹಿತಿಂಡಿ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.