ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ವಿಶ್ವರೂಪ ದರ್ಶನ

0
7

ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ, ಸಹಸ್ರಾರು ಸಂಖ್ಯೆಯಲ್ಲಿ ಹಣತೆಗಳನ್ನು ಇಟ್ಟು ದೀಪಾಲಂಕಾರ ಕಾರ್ಯಕ್ರಮಕ್ಕೆ ಶತಮಾನದ ಇತಿಹಾಸ ಇದೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ.

ರಾತ್ರಿ 3ಗಂಟೆಯಿಂದ ಹಣತೆಗಳನ್ನು ಹಚ್ಚಿ ದೀಪಾಲಂಕಾರ ಪೂಜೆ ಆರಂಭವಾಗುತ್ತದೆ, ಊರ ಪರ ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಬಂದು ಸೇರುತ್ತಾರೆ ದೇವಸ್ಥಾನ ಸುತ್ತಿನಲ್ಲಿ ಮಕ್ಕಳುವಿವಿಧ ರೀತಿಯ ರಂಗೋಲಿ ಬಿಡಿಸಿ ಜನರ ಕಣ್ಮನ ಸೆಳೆಯುವ ದೃಶ್ಯವನ್ನು ಕಾಣಬಹುದು.

ಜಿ.ಎಸ್.ಬಿ ಭಾಂದವರು ಹಾಗೂ ಶ್ರೀವೆಂಕಟರಮಣ ದೇವಸ್ಥಾನದ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಸೇವೆಯಲ್ಲಿ ಭಾಗಿಯಾಗುತ್ತಾರೆ. ದೇವಸ್ಥಾನದ ಹೊರಾಂಗಣ ಹಾಗೂ ದೇವಸ್ಥಾನದ ಒಳಗಿನ ಸುತ್ತಿನಲ್ಲಿ ಸುಮಾರು ಇಪ್ಪತೈದು ಸಾವಿರಕ್ಕಿಂತ ಹೆಚ್ಚು ಹಣತೆಗಳನ್ನು ಕಾಣಬಹುದು.