ಜೀವನದ ಸಂಧ್ಯಾ-ಕಾಲದಲ್ಲಿ ಅತ್ಯುತ್ತಮ ಸಮುದಾಯ ಜೀವನ ನಡೆಸಲು:- ‘ಸ್ವರ್ಣ ಧಾಮ’ ಶ್ರೇಷ್ಠ

0
6

ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕೆಸರಗದ್ದೆ ಬೈಲಬರಿ ರಸ್ತೆಯ ಆಯರ ಬೆಟ್ಟು ಪ್ರದೇಶದಲ್ಲಿ ಗ್ರಹಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ಸ್ ಅವರು ಹಿರಿಯ ನಾಗರಿಕರ ವಸತಿ ಬಡಾವಣೆ ಸ್ವರ್ಣಧಾಮಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಗೃಹಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ಸ್ ಅಧ್ಯಕ್ಷ ಬಾಲಕೃಷ್ಣ ಶರ್ಮ ನೆರೋಳು, ವಕೀಲರು ಬೆಳಗ್ಗೆ ಗಣ ಹೋಮದ ತರುವಾಯ ಕಾರ್ಯಕ್ರಮವನ್ನು ಮುಂದುವರಿಸಿದರು.

ಈ ಸಂದರ್ಭದಲ್ಲಿ ಸ್ವರ್ಣ ಭೂಮಿ ಪ್ರಾಪರ್ಟೀಸ್ ಐವರು ಪಾಲುದಾರರು ಹಾಜರಿದ್ದರು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಶಂಕುಸ್ಥಾಪನೆಯನ್ನು ನೆರವೇರಿಸಿ ಆಶೀರ್ವಚನ ಗೈದರು. ಬದುಕಿನ ಸಂಧ್ಯಾಕಾಲದಲ್ಲಿ ಉತ್ತಮ ಸಮುದಾಯ ಜೀವನವನ್ನು ನಡೆಸಲು ಹಾಗೂ ಸುಖದಿಂದ ತುಂಬಿದ ಬಾಳು ನಡೆಸಲು ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳು ಈ ಪ್ರದೇಶದಲ್ಲಿ ಮೂಡಿ ಬರುತ್ತಿರುವುದು ಎಲ್ಲರಿಗೂ ಸಂತಸದಾಯಕ ಸಂಗತಿ ಆಗಿದೆ. ಇಲ್ಲಿ ಹಿರಿಯ ನಾಗರಿಕರು ಆರೋಗ್ಯಯುತ, ಮನರಂಜನ ಯುಕ್ತ, ಭದ್ರತೆಯ ಬದುಕನ್ನು ನಡೆಸಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಗೌರವ ಸಲಹೆಗಾರ ನೆರೋಳು ಈಶ್ವರ ಭಟ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ, ಬೆಳುವಾಯಿ ಸೇ.ಸ.ಬೇಂಕ್ ನ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಮಾಜಿ ಪಂಚಾಯತ್ ಅಧ್ಯಕ್ಷ ರಾಘು ಪೂಜಾರಿ, ಮಾನಸ ಗ್ರೂಪ್ ನ ಎ ಸಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಪ್ರವೀಣ್ ಶೆಟ್ಟಿ, ರಮೇಶ್ ಪ್ರಭು, ಬಾಲಕೃಷ್ಣರ ತಾಯಿ ಕೃಷ್ಣ ಕುಮಾರಿ, ಪತ್ನಿ ಭಾಗ್ಯ ಶರ್ಮಾ, ಪುತ್ರ ಭವೇಶ್ ಹಾಜರಿದ್ದರು. ವಕೀಲ ಬಾಲಕೃಷ್ಣ ಶರ್ಮ ನೆರೋಳು ಸ್ವಾಗತಿಸಿದರು. ಡಾ ಶ್ರೀನಿವಾಸ ಭಟ್ ಧಾರ್ಮಿಕ ಕಾರ್ಯ ನಡೆಸಿದರು. ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ್
.