ಬೆಂಗಳೂರು–ಮಡಗಾಂವ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬ್ರಹ್ಮಾವರ ಜೈಂಟ್ಸ್ ಹಾಗೂ ಉಡುಪಿ ರೈಲು ಯಾತ್ರಿ ಸಂಘದ ಸಹಯೋಗದಲ್ಲಿ ಉಡುಪಿ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಮಹತ್ವದ ಯೋಜನೆಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಸಂಸದರಾದ ಮಾನ್ಯ ಶ್ರೀನಿವಾಸ್ ಪೂಜಾರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೈಂಟ್ಸ್ ಬ್ರಹ್ಮಾವರದ ಅಧ್ಯಕ್ಷರು ಅಣ್ಣಯ್ಯ ದಾಸ್, ಕಾರ್ಯದರ್ಶಿ ಮಿಲ್ಟನ್ ಒಲಿವೆರಾ, ಯುನಿಟ್ ಡೈರೆಕ್ಟರ್ ಸುಂದರ್ ಪೂಜಾರಿ,ಮಾಜಿ ಫೆಡರೇಶನ್ ಅಧ್ಯಕ್ಷ ಮತ್ತು ಸಲಹೆಗಾರರಾದ ಮಧುಸೂಧನ್ ಹೇರೂರು ಹಾಗೂ ರೈಲು ಯಾತ್ರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ರೈಲ್ವೆ ಸಂಪರ್ಕ ಮತ್ತು ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಮಾನ್ಯ ಸಂಸದರು ಕೃತಜ್ಞತೆ ಸಲ್ಲಿಸಿದರು.

