ಸಮಾಜಸೇವೆಯನ್ನು ಗುರುತಿಸಿ ಅಮರ್ ಕೋಟೆ ಅವರಿಗೆ ಸನ್ಮಾನ

0
7

ಮೂಡುಬಿದಿರೆ : ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಬ್ಯಾಂಕ್‌ನ 73ನೇ ಸಹಕಾರಿ ಸಪ್ತಾಹ ಕಾರ್ಯಕ್ರಮದ ಸಂದರ್ಭದಲ್ಲಿ ಸಮಾಜಸೇವಾ ಕ್ಷೇತ್ರದಲ್ಲಿನ ಕೊಡುಗೆಯನ್ನು ಗುರುತಿಸಿ ಅಮರ್ ಕೋಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಮರ್ ಕೋಟೆ ಅವರು ಬೆದ್ರ ಸೇವಾ ಪ್ರತಿಷ್ಠಾನ (ರಿ.) ಇದರ ಸಂಸ್ಥಾಪಕರಾಗಿದ್ದು, ಇದರ ಅಂಗಸಂಸ್ಥೆಗಳಾದ ಜವನರ್ ಬೆದ್ರ ಹಾಗೂ ಅಬ್ಬಕ್ಕ ಬ್ರಿಗೇಡ್‌ಗಳ ಮೂಲಕ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸಮಾಜಸೇವಾ ಕಾರ್ಯಗಳನ್ನು ಗುರುತಿಸಿ ಈ ಗೌರವ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು CAMPCO Ltd., ಪುತ್ತೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ ಚಂದ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಪಿ ಗಣಪಯ್ಯ ಭಟ್, ಪಾರ್ಶ್ವನಾಥ್ ಅಜ್ರಿ, ಬ್ಯಾಂಕಿನ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಉಪಸ್ಥಿತರಿದ್ದರು.