ಮನೆ ಕೆಲಸಕ್ಕೆ ತೆರಳಿದ ಮಹಿಳೆ ನಾಪತ್ತೆ; ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

0
7

ಉಡುಪಿ : ಮನೆ ಕೆಲಸಕ್ಕೆಂದು ತೆರಳಿದ ಮಹಿಳೆಯೊಬ್ಬರು ವಾಪಸಾಗದೆ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.ಬಿಜಾಪುರ ಮೂಲದವರಾಗಿದ್ದು, ಪ್ರಸ್ತುತ ಉಡುಪಿಯ 76 ಬಡಗುಬೆಟ್ಟು ಗ್ರಾಮದಲ್ಲಿ ವಾಸವಾಗಿದ್ದ ರವಿ ಎಲ್ಲಪ್ಪ ಅವರ ಪತ್ನಿ ಸುಮಿತ್ರಾ (38) ನಾಪತ್ತೆಯಾದ ಮಹಿಳೆ.

ನವೆಂಬರ್ 15ರಂದು ಕಲ್ಸಂಕದ ಬಳಿ ಮನೆ ಕೆಲಸಕ್ಕೆಂದು ತೆರಳಿದ್ದ ಸುಮಿತ್ರಾ ಅವರು ಈವರೆಗೆ ಮನೆಗೆ ವಾಪಸಾಗಿಲ್ಲ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಪರಿಚಯಸ್ಥರು ವಿವಿಧೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.