“ಶ್ರೀ ಗಂಗಾಧರೇಶ್ವರ ದೇವಸ್ಥಾನ,ಕರಿಮನೆ (ಹೊಸಬೀಡು) : ಧಾರ್ಮಿಕ ಸಮ್ಮಿಲನ ಕಾರ್ಯಕ್ರಮ

0
8


ನ -31 ಕ್ಕೆ ಧಾರ್ಮಿಕ ಪೂಜಾ ಕಾರ್ಯಕ್ರಮ, ಧಾರ್ಮಿಕ ಸಭೆ, ಅನ್ನದಾನ ಸಮರ್ಪಣೆ ಹಾಗೂ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ …..!”

  • ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ. ಕುಂದಾಪುರ.

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಕರಿಮನೆ – ಹೊಸಬೀಡು ಉಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲ್ಪಡುತ್ತಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನ, ಕರಿಮನೆ ಹೊಸಬೀಡು, ಇದರ ಜೀರ್ಣೋದ್ಧಾರದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮವು ದಿನಾಂಕ -301@ /11/2026 ರ ಸೋಮವಾರ ಬೆಳಿಗ್ಗೆ -9.00ಕ್ಕೆ ಸರಿಯಾಗಿ ದೇಗುಲದ ಆವರಣದಲ್ಲಿ ” ಧಾರ್ಮಿಕ ಸಮ್ಮಿಲನ ಕಾರ್ಯಕ್ರಮ ” ಸಂಭ್ರಮದಿಂದ ಜರುಗಲಿದೆ. 8:00ಕ್ಕೆ ಸರಿಯಾಗಿ ನಾಗದೇವರಿಗೆ ಸಿಹಾಳ ಅಭಿಷೇಕ, ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ಸ್ಥಳದಲ್ಲಿ ನಡೆಯಲಿದೆ. 10 ಗಂಟೆಗೆ ಸರಿಯಾಗಿ ರಾಜ್ಯದ ಕ್ಷೇತ್ರದ ಉದ್ಯಮಿಗಳು,ಧಾರ್ಮಿಕ ಮುಖಂಡರು, ರಾಜಕೀಯ ದುರಿಣರು, ಸಾಹಿತಿಗಳು ಊರಿನ ಮುಖಂಡರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಕಾರ್ಯಕ್ರಮಕ್ಕೆ ಶ್ರೀ ಗಂಗಾಧರೇಶ್ವರ ಜೀವಣೋದ್ಧಾರ ಸಮಿತಿಯ ಸಮಸ್ತ ಪದಾಧಿಕಾರಿಗಳು ಸ್ವಾಗತಿಸುತ್ತಿದ್ದಾರೆ.


ದೇಗುಲ ಇತಿಹಾಸ :-
ಐತಿಹಾಸಿಕ ಪುರಾಣ ಪ್ರಸಿದ್ಧ ದೇಗುಲಗಳಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಇತಿಹಾಸದ ಪುರಾಣ ಹಾಗೂ ದಂತಕಥೆಯನ್ನು ಹೊಂದಿರುವ ದೇಗುಲ.
ಬಿದನೂರು (ನಗರ)
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಹೊಸನಗರದಿಂದ 15 ಕಿಮೀ ದಕ್ಷಿಣಕ್ಕಿರುವ ಒಂದು ಗ್ರಾಮ. ಇದರ ಹಿಂದಿನ ಹೆಸರು ಬಿದನೂರು, ಬಿದಿರೂರು. ಹಲವು ಶಾಸನಗಳಲ್ಲಿ ಈ ಊರನ್ನು ವೇಣುಪುರ ಎಂದೂ ಕರೆದಿದೆ. ಕೆಳದಿ ಇಕ್ಕೇರಿಗಳಲ್ಲಿ ಆಳಿದ ಅರಸರು 1640ರ ಹೊತ್ತಿಗೆ ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಬಿದನೂರ ಅರಸರಾದರು. ಘಟ್ಟದ ಕೆಳಗೆ ಇಳಿಯುವ ಹೊಸಂಗಡಿ ಘಾಟಿಯ ದಾರಿಯಲ್ಲಿದ್ದು ವ್ಯಾಪಾರ ಕೇಂದ್ರವೂ ಆದುದರಿಂದ ಬಹುಬೇಗನೆ ಬೆಳೆದು ದೊಡ್ಡ ನಗರವಾಯಿತು. ಕೋಟೆಕೊತ್ತಲಗಳು ಅರಮನೆಗಳು ರಚಿತವಾದುವು.
ಕೋಟೆ ಕೋಟೆಯೊಳಗಿನ ಅರಮನೆಯ ಅವಶೇಷಗಳು
ಇಲ್ಲಿಯ ಕೋಟೆಯ ಸುತ್ತಳತೆ ಹನ್ನೆರಡು ಕಿಮೀಗಳಷ್ಟು ಇದ್ದು ಡಿಲ್ಲಿ ಬಾಗಿಲು, ಕೊಡಿಯಾಲದ ಬಾಗಿಲು, ಕವಿಲೆದುರ್ಗದ ಬಾಗಿಲು ಮುಂತಾದ ಹತ್ತು ಬಾಗಿಲುಗಳಿದ್ದುವು. ಊರಿನಲ್ಲಿ ಎತ್ತರವಾದ ಒಂದು ಗುಡ್ಡದ ಮೇಲೆ ಅರಮನೆಯಿದ್ದು ಅದನ್ನು ಸುತ್ತುವರಿದು ಒಂದು ಒಳಕೋಟೆಯೂ ಇತ್ತು. ಶಿವಪ್ಪನಾಯಕ ಈ ಪಟ್ಟಣವನ್ನು ತುಂಬ ಅಭಿವೃದ್ಧಿಪಡಿಸಿದ.
1763 ರಲ್ಲಿ ಹೈದರ್ ದಾಳಿ ಮಾಡಿದಾಗ ಇದು ಅತ್ಯಂತ ಸಂಪದ್ಭರಿತವಾದ ನಗರವಾಗಿತ್ತು.
ಸೋಲು ಖಚಿತವಾದಾಗ ಅರಮನೆಗೆ ಬೆಂಕಿಹಚ್ಚಿ ರಾಣಿ ವೀರಮ್ಮಾಜಿ ತಪ್ಪಿಸಿಕೊಂಡು ಓಡಿಹೋದರೂ ಹೈದರನಿಗೆ ಅನೇಕ ಕೋಟಿ ರೂಪಾಯಿಗಳ ಬೆಲೆ ಬಾಳುವ ಕೊಳ್ಳೆ ದೊರೆಯಿತು.

ಬಿದನೂರರಸರ ಕಾಲದಲ್ಲಿ ಇಲ್ಲಿ ನಿರ್ಮಿತವಾದ ಶಿವನ ದೇವಾಲಯ ಇತಿಹಾಸದ ಪುಟದಲ್ಲಿ ಈ ದೇವಾಲಯ
ಬಿದ್ದನೂರಿನಿಂದ ಸುಮಾರು 6 ಕಿ.ಮೀ ಸಮೀಪದಲ್ಲಿ ಇತಿಹಾಸ ಪ್ರಸಿದ್ಧಿಯ ಸ್ವಯಂ ಉದ್ಭವಲಿಂಗ ಗಂಗಾಧರೇಶ್ವರ ನೆಲೆಯಾಗಿ ನಿಂತಿರುವ ಊರು ಕರಿಮನೆ ಗ್ರಾಮ ಹೊಸಬೀಡು.
ಶಿವಮೊಗ್ಗದಿಂದ ಎಡ ತಿರುವು ಪಡೆದು ಪಶ್ಚಿಮಾಬಿಮುಖವಾಗಿ ಹೊರಟು ನಿಂತಾಗ ಘಟ್ಟ ಪ್ರದೇಶ ಮತ್ತು ಕರಾವಳಿ ಭಾಗಕ್ಕೆ ತೂಗು ಸೇತುವೆಯಂತೆ ಮೆತ್ತನೆ ಸುರುಳಿ ಸುತ್ತಿ ನಲಿಯುತ್ತಿರುವ ತಂಪಾದ ಇಳಿಜಾರು ಪ್ರದೇಶವೇ ಹೊಸನಗರ.
ಇಲ್ಲಿಂದ ಒಂದಿಷ್ಟು ದೂರ ಗಿಡಮರಗಳ ಸವಿಯ ಸವಿಯುತ್ತ ಸಂಚರಿಸಿದರೆ ಸಿಗುವ ಐತಿಹಾಸಿಕ ಪ್ರದೇಶ ಹೊಸಬೀಡು.ಸಾಕಷ್ಟು ಇತಿಹಾಸ ಇರುವ ಶಿವಪ್ಪ ನಾಯಕರ ಆಳ್ವಿಕೆಯ ರಾಜಧಾನಿ ಎಂದೇ ಖ್ಯಾತಿ ಪಡೆದ ಈ ಸ್ಥಳದಲ್ಲಿ ಇಂದಿಗೂ ಹತ್ತಾರು ಇತಿಹಾಸಕ್ಕೆ ಇಲ್ಲಿ ಸಾಕ್ಷಿ ಲಭ್ಯವಿದೆ. ಅದೇ ರೀತಿ ಸುಮಾರು ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ಪುಣ್ಯ ಸ್ಥಳದಲ್ಲಿ ಗಂಗಾಧರೇಶ್ವರ ದೇವಸ್ಥಾನದ ಉದ್ಭವಲಿಂಗ ಕೂಡ ಇದ್ದು ಎಲೆ ಮರೆಯ ಕಾಯಿಯಂತಾಗಿದೆ. ಸುತ್ತಮುತ್ತಲಿನ ಹಳ್ಳಿ ಜನರಿಗೆ ಇದರ ಮಹತ್ವ ತಿಳಿದಿದ್ದರೂ ಅದರ ಅಭಿವೃದ್ಧಿಗೆ ಸಂಪನ್ಮೂಲದ ಕೊರತೆ ಇದ್ದ ಕಾರಣ ಅಪರೂಪದಲ್ಲೇ ಅಪರೂಪವೆನಿಸಿದ
ಲಿಂಗ ಮೂಲೆಗುಂಪಾಗುವ ಹಂತದಲ್ಲಿತ್ತು.

ದೇವಸ್ಥಾನದ ಕೂಗಳತೆ ದೂರದಲ್ಲಿ ಜಾಲಧಾರೆ ಉಕ್ಕಿ ಹರಿಯುತ್ತಿದ್ದು ಇದೊಂದು ಪುಣ್ಯ ಗಂಗಾ ತೀರ್ಥ ಎಂದೇ ಬಾವಿಸಲಾಗಿದೆ ಇದರಲ್ಲಿ ಸ್ನಾನ ಮಾಡಿದಲ್ಲಿ ಸಂತಾನ ಇಲ್ಲದವರು ಸ್ನಾನ ಮಾಡಿ ಸಂತಾನ ಪಡೆದುಕೊಂಡವರು ಸಾಕಷ್ಟು ಇತಿಹಾಸ ಕೂಡ ಕಣ್ಣಂಚಿನಲ್ಲಿ ಇದೆ ಎಲ್ಲೂ ಗುಣಪಡಿಸಲಾಗದ ಕಾಯಿಲೆ ವಾಸಿಯಾದ ಸಾಕಷ್ಟು ಇತಿಹಾಸ ಕೂಡ ಇದೆ.ಇಷ್ಟೆಲ್ಲ ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ ನೆಲೆಯೂರಿದ ಮಹಾಲಿಂಗೇಶ್ವರನಿಗೆ ನಿತ್ಯ ಪೂಜೆ ಇಲ್ಲದೆ ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ಪೂಜೆ ಇಲ್ಲಿ ನಡೆಯುತ್ತಿತ್ತು ಈ ಹಿಂದೆ ಇಲ್ಲಿ ಇರುವ ಶಿವನ ಲಿಂಗಕ್ಕೆ.
ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಒಂದು ಸಮಿತಿಯನ್ನು ರಚಿಸಿ, ನಶಿಸುತ್ತಿರುವ ಐತಿಹಾಸಿಕ ಉದ್ಭವಲಿಂಗಕ್ಕೆ ಅಷ್ಟಮಂಗಳ ದೇವ ಪ್ರಶ್ನೆ ಮುಖೇನ ಗಂಗಾಧರೇಶ್ವರ ಎಂದು ಮರುನಾಮ ನೀಡಲಾಗಿದೆ. ಈಗಾಗಲೇ ಒಂದು ಶಿಸ್ತು ಸಮಿತಿ ರಚಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಅಭಿಮಾನಿಗಳು ಈ ಎಲ್ಲಾ ಕಾರ್ಯಕ್ರಮಗಳಿಗೆ ಮತ್ತು ಜೀರ್ಣೋದ್ಧಾರಕ್ಕೆ ತನು, ಮನ, ಧನ ಸಹಕಾರವನ್ನು ನೀಡಿ ಶ್ರೀಗಂಗಾಧರೇಶ್ವರ ಕೃಪೆಗೆ ಪಾತ್ರರಾಗಬೇಕಾಗಿ ವಿಜ್ಞಾಪನೆಯನ್ನು ಮಾಡಿದ್ದಾರೆ.