ನ.22 : ಅಂಬಲಪಾಡಿಯಲ್ಲಿ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’

0
2

ಉಡುಪಿ: ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.), ಬಂಕೇರಕಟ್ಟ, ಅಂಬಲಪಾಡಿ ಇದರ ಆಶ್ರಯದಲ್ಲಿ ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಸಹಯೋಗದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ನುರಿತ ವೈದ್ಯರಿಂದ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವು ನ.22 ರವಿವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ವರೆಗೆ ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಲಿದೆ.

ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಜನರಲ್ ಮೆಡಿಸಿನ್, ಮಧುಮೇಹ ತಪಾಸಣೆ, ಹೃದಯದ ತಪಾಸಣೆಯ ಜೊತೆಗೆ ಹಲ್ಲು, ಕಣ್ಣು, ಕಿವಿ ಮೂಗು, ಗಂಟಲು, ಎಲುಬು ಹಾಗೂ ಚರ್ಮ ಸಂಬಂಧಿತ ತಪಾಸಣೆಯ ಸಹಿತ ಮಕ್ಕಳ ಮತ್ತು ಸ್ತ್ರೀರೋಗ ತಪಾಸಣೆಯ ಉಚಿತ ಸೌಲಭ್ಯಗಳು ದೊರೆಯಲಿವೆ.

ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಚಿತ ಅರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.) ಅಧ್ಯಕ್ಷ ಕಾರ್ತಿಕ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿದ್ದಾರೆ.