ಬೋಳ ಕೀರ್ತನ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

0
11

ಕಾರ್ಕಳ : ಸಾವಿರಾರು ಮೊಳೆ ಹಾಗೂ ನೂಲಿನ ಭಾರತದ ನಕ್ಷೆ ರಚಿಸಿ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿರುವ ಯುವ ಕಲಾವಿದ ಕಾರ್ಕಳ ತಾಲೂಕಿನ ಬೋಳ ಕೀರ್ತನ್ ಪೂಜಾರಿ ಅವರಿಗೆ 2026ನೇ ಸಾಲಿನ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ ಕೀರ್ತನ್ ಅವರಿಗೆ ಶಾಲು, ಪೇಟ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಲೆಗೆ ತನ್ನನ್ನೇ ಮೂಡುಪಾಗಿಟ್ಟಿರುರುವ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕೀರ್ತನ್, ಹಳೆಯ ಕಾಲದ ಮರೆತುಹೋದ ವಸ್ತುಗಳನ್ನು ಸಂಗ್ರಹಿಸಿ ಇತಿಹಾಸ, ಸಂಸ್ಕೃತಿ ಉಳಿಸುವ ಕಾರ್ಯದಲ್ಲೂ ತೊಡಗಿದ್ದಾರೆ.
ಸಣ್ಣ ಪ್ರಾಯದಲ್ಲಿ ಸ್ವಂತ ಪರಿಶ್ರಮದಿಂದ ಪೇಪರ್ ಕ್ರಾಫ್ಟ್, ಡ್ರಾಯಿಂಗ್ ಕಲೆಯನ್ನು ಕರಗತ ಮಾಡಿಕೊಂಡು ಅನೇಕ ಶಿಬಿರಾರ್ಥಿಗಳಿಗೆ ಕಲೆಯನ್ನು ಬೆಳೆಸಿಕೊಟ್ಟು ಕಳೆದ ವರ್ಷದ ಹಿಂದೆ ತಾಲೂಕು ಮಟ್ಟದ ಗೂಡು ದೀಪ ಸ್ಪರ್ಧೆಯಲ್ಲಿ ಹಲವಾರು ಕಡೆ ಪ್ರಶಸ್ತಿಯನ್ನು ಪಡೆದಿರುತ್ತಾರೆ .ಕುಣಿತ ಭಜನೆ ಹಾಗೂ ತರಬೇತಿ , ಸಮಾಜ ಸೇವೆ, ಕಲೆ, ಕೃಷಿ ಮುಂತಾದ ಆಸಕ್ತಿಯುಳ್ಳವರು
2022ರಲ್ಲಿ ನಮ್ಮ ದೇಶದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಂದು ಕಬ್ಬಿಣದ ಮೊ ಳೆಗಳ ಮತ್ತು ನೂಲಿನ ಸಹಾಯದಿಂದ ಭಾರತೀಯ ನಕ್ಷೆ ತಯಾರಿಸುವ ಮೂಲಕ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ..
ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತಿನಂತೆ ಅನಾಶಕ್ತರಿಗೆ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ರೀತಿಯ ವೇಷ ಧರಿಸಿ ಭವತಿ ಭಿಕ್ಷೆದೇಹಿಯಲ್ಲಿ ಅತಿಹೆಚ್ಚು ದೇಣಿಗೆ ಸಂಗ್ರಹ ಮಾಡಿ ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಸಾರ್ಥಕತೆ..
ಭಜನೆ, ಸಂಘ-ಸಂಸ್ಥೆಗಳ ಸೇವೆಯಲ್ಲಿ ಸಕ್ರಿಯರಾಗಿರುವ ಇವರು ಇದುವರೆಗೆ 22 ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ( ರಿ ) ಮತ್ತು ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ನಾಡು ನುಡಿ ಕಲೆ, ಸಂಸ್ಕೃತಿ ಹಾಗೂ ಸಮಾಜ ಸೇವೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕೀರ್ತನ್ ಪೂಜಾರಿ ಅವರ ಸಾಧನೆಗೆ ಹಲವಾರು ಗಣ್ಯರು ಜನರು ಅಭಿನಂದನೆ ಸಲ್ಲಿಸಿದ್ದಾರೆ.