ಉಡುಪಿ: ತುಳುಕೂಟ ಉಡುಪಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ತುಳು ಕವಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 31ನೇ ವರ್ಷದ ತುಳು ಭಾವಗೀತೆ ಸ್ಪರ್ಧೆ – 2026 ಕಾರ್ಯಕ್ರಮವನ್ನು ನವೆಂಬರ್ 29ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ನಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಲ ವಿಭಾಗ, 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳಿಗೆ ಹಿರಿಯ ವಿಭಾಗ ಹಾಗೂ 25 ವರ್ಷ ಮೇಲ್ಪಟ್ಟವರಿಗೆ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.
ಮೂರು ನಿಮಿಷದ ತುಳು ಭಾವಗೀತೆ ಹಾಡಲು ಅವಕಾಶವಿದ್ದು, ಶೃತಿ ಪೆಟ್ಟಿಗೆಯನ್ನು ಬಳಸಿಕೊಳ್ಳಬಹುದು.
ತುಳು ಹಿರಿಯ, ಕಿರಿಯ ಸಾಹಿತಿಗಳ ರಚನೆ, ಸ್ವರಚಿತ ತುಳು ಭಾವಗೀತೆಗಳಿಗೆ ಆದ್ಯತೆ ನೀಡಲಾಗುವುದು.
ಪ್ರತಿ ವಿಭಾಗದಲ್ಲಿಯೂ ಪ್ರಥಮ ಬಹುಮಾನವಾಗಿ ₹1,500 ನಗದು ಹಾಗೂ ಪ್ರಶಸ್ತಿ ಫಲಕ, ದ್ವಿತೀಯ ಬಹುಮಾನವಾಗಿ ₹1,250 ನಗದು ಹಾಗೂ ಪ್ರಶಸ್ತಿ ಫಲಕ ಮತ್ತು ತೃತೀಯ ಬಹುಮಾನವಾಗಿ ₹1,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು.
ಸ್ಪರ್ಧಿಗಳು ನವೆಂಬರ್ 24ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಣಿಗಾಗಿ ಜಯರಾಮ್ ಶೆಟ್ಟಿಗಾರ್ (ಮೊ. 9844328177) ಮತ್ತು ಶ್ರೀಮತಿ ಪ್ರಭಾವತಿ ವಿಶ್ವನಾಥ್ (ಮೊ. 8277653062) ಅವರನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

