ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 6ರಂದು ಭಾನುವಾರ ಲಕ್ಷದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಮಧ್ಯಾಹ್ನ ಕುತ್ಯಾರು-ಪಾದೂರು ಹಾಗೂ ಕಳತ್ತೂರು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮಹಾ ಅನ್ನಸಂತರ್ಪಣೆ (ಮಾರಿ ಸಮಾರಾಧನೆ) ನಡೆಯಲಿದೆ. ರಾತ್ರಿ ಮಹಾರಂಗಪೂಜೆ ಹಾಗೂ ಲಕ್ಷದೀಪೋತ್ಸವ ಸಮಸ್ತರ ಸಹಕಾರದೊಂದಿಗೆ ಜರುಗಲಿದೆ.
ಮಧ್ಯಾಹ್ನ 2.30 ಗಂಟೆಗೆ ಸುರತ್ಕಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಕಲಾ ಸಂಘ ತಡಂಬೈಲು ಇವರಿಂದ ‘ಗುರುದಕ್ಷಿಣೆ’ ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅರ್ಚಕರ ವರ್ಗ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

