ವಂದೇ ಭಾರತ್ ಮಂಗಳೂರು ಸೆಂಟ್ರಲ್ ಬೇಡಿಕೆಗೆ ಆಕ್ಷೇಪ

0
7

ಮಂಗಳೂರು ಉಡುಪಿ ಕಾರವಾರದ ಎಲ್ಲಾ ಪ್ರಯಾಣಿಕರ ಸಮಯವೂ ಅಮೂಲ್ಯವಾಗಿದ್ದು ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳ ಮೂನ್ನೂರು ಕಿಲೋಮೀಟರ್ ದೂರದ ಪ್ರಯಾಣಿಕರ ಹಿತ ಪರಿಗಣಿಸದೇ ಮಂಗಳೂರಿನಲ್ಲಿ ಹಲವಾರು ಮುಖ್ಯ ನಿಲ್ದಾಣಗಳಿದ್ದೂ ವಂದೇ ಭಾರತ್ ರೀತಿಯ ಪ್ರತಿಷ್ಟಿತ ರೈಲುಗಳನ್ನೂ ಮಂಗಳೂರು ಸೆಂಟ್ರಲ್ ಒಳಗೆ ಬರ ಬೇಕು ಎಂದು ಒತ್ತಾಯಿಸುವುದು ಕರಾವಳಿ ವಿರೋದಿ ನಡೆಯಾಗಿದ್ದು ಇದಕ್ಕೆ ಉಡುಪಿ ರೈಲ್ವೇ ಯಾತ್ರೀ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಾವಿರಾರು ರೂಪಾಯಿ ಹೆಚ್ಚುವರಿ ಟಿಕೇಟ್ ದರ ಕೊಟ್ಟೂ ವಂದೇ ಭಾರತ್ ರೀತಿಯ ಪ್ರತಿಷ್ಟಿತ ರೈಲು ಉಡುಪಿಗೆ ಬರಲು ಸುಮಾರು 9 ಗಂಟೆ ಸಮಯ ತೆಗೆದುಕೊಳ್ಳುತಿದ್ಗು ಪ್ರಯಾಣಿಕರು ಬಸವಳಿಯುವಂತಾಗುತ್ತದೆ.

ಈ ರೈಲನ್ನು ಕನಿಷ್ಚ ಎರಡು ಗಂಟೆ ಬೇಗನೇ ಉಡುಪಿ ನಿಲ್ದಾಣಕ್ಕೆ ಬರುವಂತೆ ನಾವು ಆಗ್ರಹಿಸುತ್ತಿರುವಾಗ, ಬಂಟ್ವಾಳ, ಅಬಿವ್ರದ್ದಿ ಪಡಿಸ ಬಹುದಾದ ಜೋಕಟ್ಟೆ, ಪಡೀಲ್, ಸುರತ್ಕಲ್ ನಿಲ್ದಾಣಗಳ ಮೂಲಕ ರೈಲು ಬಂದಿದ್ದರೆ ಬಹಳಷ್ಟು ಸಮಯ ಉಳಿತಾಯವಾಗುತಿತ್ತು , ಆದರೆ ಸಂಸದರ ಮನವಿಯಂತೆ ವಂದೇ ಭಾರತ್ ಎರಡೂ ಕಡೆ ಇಂಜಿನ್ ಇರುವ ಕಾರಣದಿಂದ ಸಮಯ ಹಾಳಾಗಲಾರದು ಎಂಬ ಹಿನ್ನೆಲೆಯಲ್ಲಿ ನಾವು ಮಂಗಳೂರು ಜಂಕ್ಷನ್ ಮೂಲಕ ಬಂದರೂ ವಿರೋದ ಮಾಡದೇ ಸ್ವಾಗತಿಸಿದ್ದು , ಈಗ ಅದೂ ಸಾಲದೇ ಮತ್ತೆ ಮಂಗಳೂರು ಸೆಂಟ್ರಲ್ ರೀತಿಯ ಒಳ ಭಾಗದ ನಿಲ್ದಾಣಕ್ಕೆ ಕೇಳುತ್ತಿರುವುದನ್ನು ಉಡುಪಿ ಯಾತ್ರೀ ಸಂಘ ತೀವ್ರವಾಗಿ ವಿರೋದಿಸುತ್ತದೆ.
ಈ ಹಿಂದೆ ಹದಿನೈದು ನಿಮಿಷ ಮಾತ್ರ ಸಾಕು ಎಂದು ಸೆಂಟ್ರಲ್ ಒಳ ಹೋದ ಬೆಂಗಳೂರು ಉಡುಪಿ ರೈಲುಗಳ ಗಂಟೆಗಟ್ಟಲೆ ಹಾಳಾದ ಉದಾಹರಣೆ ಕಣ್ಣ ಮುಂದಿದ್ದು , ವಂದೇ ಭಾರತ್ ರೈಲಿನ ಪ್ರತೀ ನಿಮಿಷವೂ ಅದರ ವೇಗ ಹೆಚ್ಚಳಕ್ಕೆ ಗಮನ ನೀಡಿ ಮಂಗಳೂರು ಉಡುಪಿ ಕಾರವಾರದ ಎಲ್ಲರಿಗೂ ಸಮಯ ಉಳಿತಾಯ ಮಾಡ ಬೇಕು ಎಂದು ಉಡುಪಿ ರೈಲ್ವೇ ಯಾತ್ರೀ ಸಂಘ ಮನವಿ ಮಾಡಿದೆ.

ಈಗಿರುವ ವಂದೇ ಭಾರತ್ ರೈಲಿನ ಟೈಮ್ ಟೇಬಲ್ ನಲ್ಲಿ ಬಾರೀ ಲೋಪಗಳಿದ್ದು ಅದನ್ನು ಸರಿಪಡಿಸಿ ಜನರ ಸಮಯ ಉಳಿಸ ಬೇಕೇ ಹೊರತೂ , ಹೆಚ್ಚುವರಿ ಸಮಯವಿದೆ ಎಂಬ ಕಾರಣಕ್ಕೆ ಒಂದೇ ನಗರದೊಳಗೆ ಈ ಪ್ರತಿಷ್ಟಿತ ರೈಲನ್ನು ಓಡಿಸುವುದು ಸರಿಯಲ್ಲ ಎಂದು ಉಡುಪಿ ರೈಲ್ವೇ ಯಾತ್ರೀ ಸಂಘ ತಿಳಿಸಿದೆ.

ಮಂಗಳೂರಿನಂತೆ ಉಡುಪಿ ನಗರವೂ ಕರಾವಳಿಯ ಪ್ರಮುಖ ನಗರವಾಗಿದ್ದು ಬೆಂಗಳೂರು ಮುಂಬಯಿ ಸೇರಿ ಎಲ್ಲಾ ಕಡೆ ಸಂಪರ್ಕ ಸಿಗ ಬೇಕಾದ ಊರಾಗಿದೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರಾದ ಧೀರಜ್ ಎನ್ ಶಾಂತಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.