ಉಡುಪಿ : ಸಹಕಾರ ತತ್ತ್ವವನ್ನು ಜಗತ್ತಿಗೆ ಸಾರಿದ ನಾಡು ಉಡುಪಿ. ನೀ ನನಗಿದ್ದರೆ ನಾ ನಿನಗೆ ಎಂದು ಸಹಕಾರದ ಮಹತ್ವವನ್ನು ಕವಿ ಸಾರಿದ್ದಾರೆ. 25 ವರ್ಷಗಳ ನವ ತರುಣ ಗುರು ನಿತ್ಯಾನಂದ ಸೊಸೈಟಿ ಸ್ವಂತ ಕಟ್ಟಡ ನಿರ್ಮಿಸುವ ಶುಭ ಸಂದರ್ಭದಲ್ಲಿದೆ. ಇದಕ್ಕೆ ಸಮಾಜದ ಸಹಕಾರ ಅಗತ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಗುರು ನಿತ್ಯಾನಂದ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ವತಿಯಿಂದ ಮಿತ್ರ ಆಸ್ಪತ್ರೆಯ ಬಳಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ದೀಪ ಬೆಳಗಿ, ಆಶೀರ್ವಚನ ನೀಡಿದರು.
ಬೆಂಗಳೂರು ಎಂಆರ್ಜಿ ಗ್ರೂಪ್ನ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ, ನಮ್ಮ ನಾಡಿನ ಜನರು ವಿದ್ಯಾವಂತರು. ಆದ್ದರಿಂದ ಸಾಲ ನೀಡುವಾಗ ದಾಖಲೆಗಳನ್ನು ಮಾತ್ರ ನೋಡದಿರಿ. ಬದುಕಲು ಹೋರಾಟ ಮಾಡುವ ವ್ಯಕ್ತಿಯ ಮುಖವನ್ನು ನೋಡಿ ಸಾಲ ನೀಡಿ ಎಂದರು.
ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಕರಾವಳಿಯ ಆರ್ಥಿಕತೆಗೆ ಸಹಕಾರಿ ಸೊಸೈಟಿಗಳು ಕೊಡುಗೆ ನೀಡುತ್ತಿವೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ ಎಂದರು.
ಉಡುಪಿ ಬಂಟರ ಸಂಘ ಅಧ್ಯಕ್ಷಪುರುಷೋತ್ತಮ ಪಿ. ಶೆಟ್ಟಿ ಮುಂಬಯಿ-ಉಡುಪಿ ವಿ. ಕೆ. ಗ್ರೂಪ್ನ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಸಾಯಿರಾಧಾ ಗ್ರೂಪ್ನ ಸಿಎಂಡಿ ಮನೋಹರ ಎಸ್. ಶೆಟ್ಟಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಮಿತ್ರ ಆಸ್ಪತ್ರೆಯ ಡಾ। ಸಾರೀಕಾ ಎನ್. ಹೊಳ್ಳ ಕಾವ್ಯದರ್ಶಿ ರಾಜೇಶ್ ಶೆಟ್ಟಿ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ ಸೊಸೈಟಿಯ ನಿರ್ದೇಶಕರಾದ ಡಾ| ತಲ್ಲೂರು ಶಿವರಾಮ ಶೆಟ್ಟಿ ಬಿ. ಹರೀಶ್ ಹೆಗ್ಡೆ ಮೋಹನ್ ಶೆಟ್ಟಿ ಮೂಡುನಿಡಂಬೂರು, ಶ್ವೇತಾ ಜಯಕರ ಶೆಟ್ಟಿ ಇಂದ್ರಾಳಿ, ನವೀನಾ ಪಿ. ಶೆಟ್ಟಿ ವಿ. ಚಂದ್ರಹಾಸ ಶೆಟ್ಟಿ ಶಿವಪ್ರಸಾದ್ ಶೆಟ್ಟಿ ಸಂತೋಷ್ ಆರ್. ಶೆಟ್ಟಿ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸೊಸೈಟಿ ಅಧ್ಯಕ್ಷಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ. ಕೃಷ್ಣ ಆಳ್ವ ವಂದಿಸಿದರು. ಸತೀಶ್ ಶೆಟ್ಟಿ ನಿರೂಪಿಸಿದರು.

