ಸ್ವಚ್ಛತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.. ಶಾಂತಪ್ಪ

0
12

ಕಲ್ಲಡ್ಕ : ಸ್ವಚ್ಛತಾ ಅಭಿಯಾನವು ಕೇವಲ ಕಸವನ್ನು ತೆಗೆದುಹಾಕುವ ಕಾರ್ಯಕ್ರಮವಲ್ಲ. ಅದು ಜನರ ಮನೋಭಾವ ಬದಲಾಯಿಸುವ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸುಂದರ ಪರಿಸರವನ್ನು ಕೊಡುಗೆಯಾಗಿ ನೀಡುವ ಮಹತ್ವದ ಸಾಮಾಜಿಕ ಚಳವಳಿಯಾಗಿದೆ. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾದ್ಯ ಎಂದು ಹಸಿರು ದಳ ಮಂಗಳೂರು ಇದರ ಮೇಲ್ವಿಚಾರಕ ಶಾಂತಪ್ಪ ಹೇಳಿದರು.

ಅವರು ನವೆಂಬರ್ 21ನೇ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ಗ್ರಾಮ ಪಂಚಾಯತ್ ವೀರಕಂಭ, ಹಸಿರುದಳ ಮಂಗಳೂರು, ಸ್ನೇಹ ಸಂಜೀವಿನಿ ಒಕ್ಕೂಟ ವೀರಕಂಭ, ಸರಕಾರಿ ಪ್ರಾಥಮಿಕ ಶಾಲಾ ಸ್ಕೌಟ್,ಗೈಡ್ಸ್ , ಹಾಗೂ ಇಕೋ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಹಾಗೂ ಸ್ವಚ್ಛತೆ ಹಾಗೂ ಕಸ ನಿರ್ವಹಣಾ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಜಿ ಶಾಲಾ ವಠಾರದಿಂದ ವೀರಕಂಭ ಗ್ರಾಮ ಪಂಚಾಯತ್ ತನಕ ಪರಿಸರ ಜಾತ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛ ಗೊಳಿಸುದರ ಜೊತೆಗೆ ಪರಿಸರದಲ್ಲಿದ್ದ ನಾಲ್ಕು ಪ್ರಯಾಣಿಕರ ತಂಗುಧಾನ ಸ್ವಚ್ಛಗೊಳಿಸಲಾಯಿತು. ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಹಾಗೂ ಪ್ಲಾಸ್ಟಿಕ್ ಕಡಿಮೆ ಬಳಕೆ ಬಗ್ಗೆ ಮನವರಿಕೆ ಮಾಡಲಾಯಿತು.

ನಂತರ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ವಚ್ಛ ಪರಿಸರ ಬಗ್ಗೆ ಮಾಹಿತಿ ನೀಡಿ ಪರಿಸರಕ್ಕೆ ಸಂಬಂಧಪಟ್ಟ ಮತ್ತು ಮಾನವನ ಸ್ವಾರ್ಥದಿಂದಾಗಿ ಆತನು ಸಮಾಜಕ್ಕೆ ಯಾವ ರೀತಿ ಕೆಡುಕನ್ನು ಉಂಟು ಮಾಡುತ್ತಿದ್ದಾನೆ ಎಂಬ ವಿಷಯದ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಗಾಯತ್ರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಬು ಕುಮಾರ್ ಶರ್ಮ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಬ್ದುಲ್ ಕರೀಂ, ಸ್ನೇಹ ಸಂಜೀವಿನಿ ಒಕ್ಕೂಟ (ರಿ ) ವೀರಕಂಭ ಒಕ್ಕೂಟ ದ ಅಧ್ಯಕ್ಷೆ ಕುಸುಮ ಶೆಟ್ಟಿ, ಒಕ್ಕೂಟ ದ ಪದಾಧಿಕಾರಿ ದೀಪ ವೈ, ಎಂಬಿ ಕೆ ಮಲ್ಲಿಕಾ ಎಸ್ ಶೆಟ್ಟಿ, ಪಶು ಸಖಿ ಪ್ರಚೀನ , ಕೃಷಿ ಸಖಿ ನಮಿತ, ಎಲ್ ಸಿ ಆರ್ ಪಿ ರೂಪಶ್ರೀ, ಎಫ್ ಎಲ್ ಸಿ ಆರ್ ಪಿ ಪೂಜಾ,ಹಸಿರು ದಳ ಮಂಗಳೂರು ಮೇಲ್ವಿಚಾರಕಿ ಭವ್ಯಶ್ರೀ ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ, ಶಾಲಾ ಸ್ಕೌಟ್ ಮಾಸ್ಟರ್ ಶಿಕ್ಷಕಿ ಸಂಗೀತ ಶರ್ಮ, ಶಾಲಾ ಇಕೋ ಕ್ಲಬ್ ಮೇಲ್ವಿಚಾರಕಿ ಹಾಗೂ ಗೈಡ್ ಕ್ಯಾಪ್ಟನ್ ಸಂಪ್ರಿಯಾ, ಶಿಕ್ಷಕ ತೌಸೀಫ್ ಅಹ್ಮದ್, ಶಿಕ್ಷಕಿ ಮಮತಾ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಶಾಲಾ ಶಿಕ್ಷಕರು ಸಹಕರಿಸಿದರು.