ಸಾಣೂರು : ಡಿ.28ರಂದು ಶ್ರೀ ನಾಗದೇವರ 8ನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ನಾಗ ದರ್ಶನ

0
6

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಇಂದಿರಾನಗರ ಕರಿಯಕಲ್ಲು ಪುಲ್ಕೇರಿಯ ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ನಾಗದೇವರ ಎಂಟನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀ ಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಶಾಂತಿ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ನಾಗ ದರ್ಶನ ನವೆಂಬರ್ 28ರಂದು ಶನಿವಾರ ನಡೆಯಲಿದೆ.

ಇದರ ಅಂಗವಾಗಿ ಬೆಳಿಗ್ಗೆ 8.05ರಿಂದ ಶ್ರೀ ನಾಗದೇವರಿಗೆ ತನು ಪಂಚಾಮೃತ ಅಭಿಷೇಕ ನೆರವೇರಲಿದೆ. ಬೆಳಿಗ್ಗೆ 10.05ಕ್ಕೆ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ಪವಮಾನ ಸೂಕ್ತ ಹೋಮ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 12.05ಕ್ಕೆ ಶ್ರೀ ಆದಿಮಾಯೆ ದೇವಸ್ಥಾನ, ತಂದೋಳಿಗೆ ಜಪ್ಪಿನ ಮೊಗರು, ಮಂಗಳೂರಿನ ಪ್ರಧಾನ ಅರ್ಚಕರಾದ ಶ್ರೀ ದಯಾನಂದ ನಾಗಪಾತ್ರಿಯವರಿಂದ ನಾಗ ಸಂದರ್ಶನ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಲಕ್ಕಿ ಡ್ರಾ ಆಯೋಜಿಸಲಾಗಿದೆ. ಆಶ್ಲೇಷಾ ಬಲಿ ಸೇವೆಯ ಒಂದು ಬಾಬ್ತು ರೂ. 350 ನಿಗದಿಪಡಿಸಲಾಗಿದೆ.

ಕ್ಷೇತ್ರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕ ಹಾಗೂ ಸರ್ವಸದಸ್ಯರು, ಗುತ್ತು ಬರ್ಕೆಗಳ ಗುರಿಕಾರರು ಮತ್ತು ಊರ-ಪರವೂರ ಹತ್ತು ಸಮಸ್ತರು ಭಕ್ತಾದಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಾಗದೇವರ ಸಿರಿಮುಡಿ ಗಂಧ-ಪ್ರಸಾದ ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದ್ದಾರೆ.