ಅಳದಂಗಡಿ :‘ನಮ ಮಾತೆರ್ಲ ಒಂಜೇ’ ಕಲಾತಂಡ ಅರುವ, ಅಳದಂಗಡಿ ಇದರ 20ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 29ರಂದು ಸಂಜೆ 6 ಗಂಟೆಯಿಂದ ಅಳದಂಗಡಿಯ ಪಂಚಾಯತ್ ವಠಾರದಲ್ಲಿ ‘ನೂತನ ಕಲಾಕುಸುಮ – ಬ್ರಹ್ಮಕಲಶಾಭಿಷೇಕ’ ಎಂಬ ತುಳು ಯಕ್ಷಗಾನದ ಪ್ರಸಂಗ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಶ್ರೀ ಪದ್ಮ ಪ್ರಸಾದ ಅಜಿಲರ ಶುಭಾಶೀರ್ವಾದದೊಂದಿಗೆ ಹಾಗೂ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಅರುವ ಅವರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮುಲ್ಕಿ ಇವರ ಕಲಾವಿದರಿಂದ ‘ನೂತನ ಕಲಾಕುಸುಮ – ಬ್ರಹ್ಮಕಲಶಾಭಿಷೇಕ’ ಎಂಬ ತುಳು ಯಕ್ಷಗಾನದ ಪ್ರಸಂಗ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ‘ಗಗ್ಗರ’ ಯಕ್ಷಗಾನ ಪ್ರಸಂಗದ ಖ್ಯಾತಿಯ ರಮೇಶ್ ಸುವರ್ಣ ಅರುವ ಅವರ ರಚನೆ ಹಾಗೂ ವಿರಚಿತ ಸುಬ್ಬು ಸಂಟ್ಯಾರ್ ಅವರ ಪದ್ಯರಚನೆಯ ಈ ಯಕ್ಷಗಾನ ಬಯಲಾಟವು ಮೂಡಿಬರಲಿದೆ.
ರಾತ್ರಿ 7ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ಯಕ್ಷಗಾನ ನಡೆಯಲಿದ್ದು, ಯಕ್ಷಗಾನಾಸಕ್ತರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

