ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್ ಮೈ ಭಾರತ್ ಉಡುಪಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಹಾಗೂ ಸ. ಪ. ಪೂ. ಕಾಲೇಜು ಸಾಣೂರು ಪ್ರೌಢಶಾಲಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಜನಜಾತಿಯ ಗೌರವ ದಿವಸ್- ಬಿರ್ಸಾ ಮುಂಡಾ ಜನ್ಮದಿನಾಚರಣೆ ನಡೆಸಲಾಯಿತು .
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯೋಪಾಧ್ಯರಾದ ಲವೀನಾ ಮೇಲ್ವಿಟಾ ನೊರೊನ್ನಾ ಇವರು ನೆರವೇರಿಸಿ ಯುವಕ ಮಂಡಲದ ಸಮಾಜಮುಖಿ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಸಾಣೂರು ಸರಸಿಂಹ ಕಾಮತ್ ಪ್ರದಾನ ಕಾರ್ಯದರ್ಶಿ ಸಹಕಾರ ಭಾರತಿ ಕರ್ನಾಟಕ ಇವರು ಬಿರ್ಸಾ ಮುಂಡಾ ಇವರ ಜೀವನ ಚರಿತ್ರೆಯ ಬಗ್ಗೆ ವಿವರಿಸುತ್ತಾ ಬಿರ್ಸಾ ಮುಂಡಾ ಎಂದರೆ ಕೇವಲ ಒಂದು ಹೆಸರಲ್ಲ, ಅದು ಒಂದು ಕ್ರಾಂತಿ 1875 ರ ನವೆಂಬರ್ 15 ರಂದು ಜಾರ್ಖಂಡ್ ನ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಈ ಬಡ ಹುಡುಗ, ಕೇವಲ 24 ವರ್ಷದೊಳಗೆ ಬ್ರಿಟಿಷರನ್ನೇ ನಡುಗಿಸಿದ ಆಗ ಬ್ರಿಟಿಷರು ನಮ್ಮ ಆದಿವಾಸಿ ಸಹೋದರರ ಭೂಮಿಯನ್ನು ಕಿತ್ತುಕೊಂಡರು ಕಾಡನನ್ನು ಕಿತ್ತುಕೊಂಡರು ಆಗ ಬಿರ್ಸಾ ಗರ್ಜಿಸಿದ ಅವನು ಕೈಯಲ್ಲಿ ಬಂದೂಕು ಹಿಡಿದಿರಲಿಲ್ಲ ಬಿಲ್ಲು, ಬಾಣ ಹಿಡಿದು ಇಡೀ ಬ್ರಿಟಿಷ್ ಸೈನ್ಯದ ವಿರುದ್ಧ ನಿಂತ ಜನರು ಅವನನ್ನು ಪ್ರೀತಿಯಿಂದ ಧರ್ತಿ ಆಬಾ – ಅಂದರೆ ಭೂಮಿಯ ತಂದೆ ಎಂದು ಕರೆದರು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ವಹಿಸಿದ್ದರು ಮಾಜಿ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ವಿಮಲಾ ವಂದನಾರ್ಪಣೆಗೈದರು ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

