15 ವರ್ಷಗಳ ಬಳಿಕ ಪದವಿ ಕಾಲೇಜುಗಳಿಗೆ ಗ್ರೇಡ್-1 ಪ್ರಾಂಶುಪಾಲರ ನೇಮಕಾತಿ

0
8

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ 410 ಕಾಲೇಜುಗಳಲ್ಲಿ ಖಾಲಿ ಇರುವ ಗ್ರೇಡ್ ಒನ್ ಪ್ರಾಂಶುಪಾಲರುಗಳ ಹುದ್ದೆಯನ್ನು ಕೆ ಇ ಎ ಮೂಲಕ ಪರೀಕ್ಷೆ ನಡೆಸಿ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು 2022 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈ 2023 ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ನೇಮಕಾತಿ ಪ್ರಕ್ರಿಯೆ ಹಲವಾರು ಅಡೆತಡೆಗಳಿಂದ ಕುಂಟುತ್ತ ಸಾಗಿ ಕೊನೆಗೂ ಮಂಜೂರಾತಿಯಾದ 310 ಖಾಲಿ ಹುದ್ದೆಗಳಲ್ಲಿ 222 ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಲು ಅವಕಾಶ ನೀಡಿ ನೇಮಕಾತಿ ಆದೇಶ ನೀಡಲಾಗಿದೆ.

KEA ಪರೀಕ್ಷೆ ಬರೆದ 813 ಅಭ್ಯರ್ಥಿಗಳ ಪೈಕಿ ರಾಜ್ಯಮಟ್ಟದಲ್ಲಿ 23ನೇ ರಾಂಕ್ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ rank ಪಡೆದ ಡಾ. ಶ್ರೀಮತಿ ಅಡಿಗ ಇವರು
ಉಡುಪಿ ಜಿಲ್ಲೆಯಲ್ಲಿ 12 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಅತ್ಯಂತ ಪ್ರತಿಷ್ಠಿತ ಕಾಲೇಜು ಎಂದು ಹೆಸರಾದ ಅಜ್ಜರಕಾಡಿನ ಡಾ ಜಿ ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲರಾಗಿ ನೇಮಕಾತಿಯಾಗಿ ಈ ದಿನ ಅಧಿಕಾರ ಸ್ವೀಕರಿಸಿರುತ್ತಾರೆ.