ದಿವ್ಯಾಂಗರ ಸೇವೆಯೇ ದೇವರ ಸೇವೆ : ಕೊಡವೂರು

0
14

ಎಂ.ಸಿ.ಕೆ.ಎಸ್. ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್, ಬೆಂಗಳೂರು ಇವರ ಆಶ್ರಯದಲ್ಲಿ ಆಯ್ದ ದಿವ್ಯಾಂಗರು ಮತ್ತು ಅಶಕ್ತರಿಗೆ ಆಹಾರ ಕಿಟ್ ವಿತರಣೆ ಹಾಗೂ ಬೆನ್ನುಮೂಳೆ ಮತ್ತು ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಒಳಗೊಂಡ 52ನೇ ಸೇವಾ ಕಾರ್ಯಕ್ರಮ ಇಂದು ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಆಯ್ದ ದಿವ್ಯಾಂಗರು ಹಾಗೂ ಅಶಕ್ತರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕೊಡವೂರು ಅವರು, ಸಮಾಜದ ಅಸಹಾಯಕರು ಹಾಗೂ ದಿವ್ಯಾಂಗರ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ದಿವ್ಯಾಂಗರ ಸೇವೆಯೇ ದೇವರ ಸೇವೆ ಎಂಬ ಆಶಯದೊಂದಿಗೆ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸೇವಾಧಾಮ ಟ್ರಸ್ಟ್‌ನ ಉಡುಪಿ ಜಿಲ್ಲಾ ಕ್ಷೇತ್ರ ಸಂಯೋಜಕಿ ಕವಿತಾ ಯು. ಪೂಜಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬೆನ್ನುಮೂಳೆ ಮತ್ತು ಬೆನ್ನುಹುರಿ ಅಪಘಾತಕ್ಕೊಳಗಾದವರ ಆರೈಕೆ, ಅಗತ್ಯ ಮಾಹಿತಿ ಹಾಗೂ ಲಭ್ಯವಿರುವ ನೆರವಿನ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಹರೀಶ್ ಕೊಪ್ಪಲ್ ತೋಟ ಅವರು ಸ್ವಾಗತಿಸಿದರು. ಜಯ ಅವರು ಧನ್ಯವಾದ ಅರ್ಪಿಸಿದರು.