ಬಂಟ್ವಾಳ: 3ನೇ ವರ್ಷದ ‘ಯಕ್ಷ ಬೊಳ್ಳಿ ಬೊಲ್ಪು’ ಮಹೋತ್ಸವ

0
2

ಬಂಟ್ವಾಳ: ಇಲ್ಲಿನ ಬಂಟ್ವಾಳ ಬೈಪಾಸ್ ಸಮೀಪದ ಲೆಕ್ಕೆಸಿರಿಪಾದೆ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಯಕ್ಷ ಕಾವ್ಯ ತರಂಗಿಣಿ ಮತ್ತು ದರ್ಬೆ ಭಾಗವತ ದಿವಂಗತ ಚಂದಪ್ಪ ಪೂಜಾರಿ ಪ್ರತಿಷ್ಠಾನ ವತಿಯಿಂದ 3ನೇ ವರ್ಷದ ‘ಯಕ್ಷ ಬೊಳ್ಳಿ ಬೊಲ್ಪು’ ಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.

ಇದೇ ವೇಳೆ ನೂತನ ರಂಗಸ್ಥಳ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳಿಂದ ಯಕ್ಷಗಾನ ಗಾನಾರ್ಚನೆ, ಕೃಷ್ಣ ಅಷ್ಟಮಾಂಗನೆಯರ ಒಡ್ಡೋಲಗ, ಶ್ರೀ ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನಗೊಂಡಿತು. ಪ್ರಮುಖರಾದ ಸಂದೀಪ್ ಪೂಜಾರಿ ದರ್ಬೆ, ಮಧುಸೂದನ್ ಪಾಲನ್ ಮುಂಬೈ, ನಿತ್ಯಾನಂದ ಸಪಲ್ಯ, ಪುರುಷೋತ್ತಮ ಬಿ., ಗುರುಪ್ರಸಾದ್ ಶಕ್ತಿನಗರ, ನಾಗಲತಾ ಶುಭ ಹಾರೈಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಂಧ್ಯಾ ಪೂಜಾರಿ ದರ್ಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಸೇವಾ ಯೋಜನೆಯಡಿ ಪ್ರಜ್ಞಾ ಆಶ್ರಮ, ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರ ಬಿರುಮಲೆ, ಗುರು ಚೈತನ್ಯ ಸೇವಾಶ್ರಮ ಗುಂಡೂರಿ ಸಂಸ್ಥೆಗೆ ನೆರವು ಹಸ್ತಾಂತರಿಸಲಾಯಿತು.

ಕಲಾವಿದರಾದ ತಿಮ್ಮಪ್ಪ ಮಿಜಾರು, ಮೂರ್ಜೆ ವೆಂಕಟೇಶ್ ಶೆಟ್ಟಿ, ವೆಂಕಪ್ಪ ರೆಂಜಾಳ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಲವೀಶ್ ಶಕ್ತಿನಗರ, ಪ್ರಸ್ತುತಿ ಶೆಟ್ಟಿ ಜಕ್ರಿಬೆಟ್ಟು, ರಚನಾ ಎಂ. ಎಚ್. ಶಕ್ತಿನಗರ, ಪ್ರಜ್ವಲ್ ಎಸ್. ಬಂಟ್ವಾಳ, ಶಮಾ ಎಂ.ಸಪಲ್ಯ ಬಂಟ್ವಾಳ ಇವರಿಗೆ ಪ್ರತಿಭಾ ಮತ್ತು ಸಾಧನಾ ಪುರಸ್ಕಾರ ನೀಡಲಾಯಿತು.
ತೆಂಕುತಿಟ್ಟು ಸ್ತ್ರೀ ವೇಷಧಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು ಇವರಿಗೆ ‘ಭಾಗವತ ಚಂದಪ್ಪ ಪೂಜಾರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಧಾರ್ಮಿಕ ಚಿಂತಕ ಚಂದ್ರಶೇಖರ ಪೂಜಾರಿ ಮುಂಬೈ, ಬಿಜೆಪಿ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಡಾ.ಪ್ರಹಾಸ್ ಮಂಗಳೂರು, ಪ್ರತೀಕ್ಷಾ ಅಮೀನ್ ಮಂಗಳೂರು, ಶಾಸ್ತಿçÃಯ ಸಂಗೀತ ವಿದ್ವಾನ್ ಅಮಿತ್ ಕುಮಾರ್ ಬೆಂಗ್ರೆ, ಪ್ರಮುಖರಾದ ವಿಶ್ವನಾಥ್ ಶೆಟ್ಟಿ ಮಡ್ಯಾರ್ ಗುತ್ತು, ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು, ಸತೀಶ್ ಪೂಜಾರಿ ಕಾಂಜಿರಕೋಡಿ, ಜನಾರ್ಧನ ಬಿ. ಅಮ್ಮುಂಜೆ, ಕೃಷ್ಣ ಕುಮಾರ್ ಶಕ್ತಿನಗರ , ಸೋಮನಾಥ ನಾಯಕ್ ಮುಂಬೈ ಮತ್ತಿತರರು ಇದ್ದರು.

ಸಭಾ ಕಾರ್ಯಕ್ರಮ ಬಳಿಕ ತೆಂಕುತಿಟ್ಟಿನ ಕಲಾವಿದರ ಕೂಡುವಿಕೆಯಲ್ಲಿ ‘ಅಮರ ಶಿಲ್ಪಿ ವೀರ ಶಂಭು ಕಲ್ಕುಡ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು