ಶ್ರೀ ಜನಾರ್ದನ ಫ್ಯೂಯಲ್ಸ್ ಉದ್ಘಾಟನೆ

0
6

ಉಜಿರೆ : ಬೆಳಾಲು-ಉಜಿರೆ ರಸ್ತೆ ಬಳಿ ಇರುವ ಓಡಲ ಎಂಬಲ್ಲಿ ಎಂ.ಆರ್.ಪಿ.ಎಲ್. ನವರ ಅಧಿಕೃತ ಇಂಧನ ಮಾರಾಟ ಘಟಕ ಶ್ರೀ ಜನಾರ್ದನ ಫ್ಯೂಯಲ್ಸ್ ಬುಧವಾರ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಉದ್ಘಾಟಿಸಿ ಶುಭ ಹಾರೈಸಿದರು.

ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ, ಪೆರಿಂಜೆ ಗುತ್ತು ಜಯರಾಜ ಕಂಬಳಿ, ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಸನ್ಮತಿ ಕುಮಾರ್, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್, ಪುಷ್ಪರಾಜ ಜೈನ್ ಮಡಂತ್ಯಾರು, ಉಪನ್ಯಾಸಕ ಮಹಾವೀರ ಜೈನ್ ವೇಣೂರು, ಬೆಳ್ಳಿಬೀಡು ಹೇಮರಾಜ್ ಕೆ., ಎಸ್.ಡಿ.ಎಂ. ಎಂಜಿನಿಯರಿAಗ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಡಾ. ರಜತ ಪಿ. ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಸೋಮಸೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನೂತನ ಘಟಕದ ಮಾಲಕರಾದ ಪ್ರವೀಣ್ ಕುಮಾರ್ ಇಂದ್ರ ದಂಪತಿ, ಸತ್ಯಪ್ರಸಾದ್ ವಿ. ಜೈನ್ ಕುಟುಂಬದವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.