ನ.29ರಂದು ನೂತನ ಕುಲಾಲ ಸಮುದಾಯ ಭವನದ ಪ್ರವೇಶೋತ್ಸವ ಹಾಗೂ ವಾರ್ಷಿಕೋತ್ಸವ

0
8

ಉಳ್ಳಾಲ : ಇರಾ ಮಂಚಿ ಕುಲಾಲ ಸಂಘ (ರಿ.) ಇದರ ವತಿಯಿಂದ ನೂತನವಾಗಿ ನಿರ್ಮಿಸಲಾದ ಕುಲಾಲ ಸಮುದಾಯ ಭವನದ ಪ್ರವೇಶೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ನವೆಂಬರ್ 29ರ ಆದಿತ್ಯವಾರದಂದು ಇರಾ ಗ್ರಾಮದ ಸಂಪಿಲದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 6.30ಕ್ಕೆ ಗಣಹೋಮ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಬೆಳಗ್ಗೆ 10.30ಕ್ಕೆ ನೂತನ ಕುಲಾಲ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಅತಿಥಿಗಳ ಆಸನ ಸ್ವೀಕಾರ, ಪ್ರಾರ್ಥನೆ, ಸ್ವಾಗತ, ಪ್ರಸ್ತಾವನೆ, ಉದ್ಘಾಟನೆ, ಉದ್ಘಾಟಕರ ಮಾತು, ಅಭಿನಂದನೆ, ಅತಿಥಿಗಳ ಭಾಷಣ, ಅಧ್ಯಕ್ಷರ ಮಾತು ಹಾಗೂ ವಂದನಾರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಇರಾ ಮಂಚಿ ಕುಲಾಲ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಸಮುದಾಯ ಭವನವು ಕುಲಾಲ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ವೇದಿಕೆಯಾಗುವ ನಿರೀಕ್ಷೆಯಿದೆ.

ಈ ಶುಭ ಸಮಾರಂಭಕ್ಕೆ ಸಮಾಜ ಬಾಂಧವರು, ಹಿತೈಷಿಗಳು ಹಾಗೂ ಊರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಆಹ್ವಾನಿಸಿದ್ದಾರೆ