ದುಬೈ ವಿಶ್ವಕರ್ಮ ಪೂಜಾ ಮಹೋತ್ಸವ

0
14

ಹಿಮ್ಮೇಳ ಕಲಾವಿದ ಸವಿನಯ ನೆಲ್ಲಿತೀರ್ಥ ರವರಿಗೆ “ಲಯ ಬ್ರಹ್ಮ-ಪ್ರಚಂಡ ಚೆಂಡೆ ಮದ್ದಳೆ ಮಾಂತ್ರಿಕ’ ಪ್ರಶಸ್ತಿ ಪ್ರದಾನ

ದುಬೈ : ವಿಶ್ವಕರ್ಮ ಸೇವಾ ಸಮಿತಿ ಯುಎಇಯ ವತಿಯಿಂದ ಇತ್ತೀಚೆಗೆ ದುಬೈನಲ್ಲಿ 24ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಅಂತಾರಾಷ್ಟ್ರೀಯ ಪ್ರಸಿದ್ಧ ಜ್ಯೋತಿಷ್ಯರು,ಅನರ್ಘ್ಯ ರತ್ನ ತಜ್ಞರು ಹಾಗೂ ವಾಸ್ತು ತಜ್ಞರಾದ ಶ್ರೀ ಅಶೋಕ್ ಪುರೋಹಿತರ ಪೌರೋಹಿತ್ಯದಲ್ಲಿ ನಡೆಯಿತು.

ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ರಾವ್, ಉಪಾಧ್ಯಕ್ಷರಾದ ಸ್ವಾತಿ ವಿವೇಕ್,ಕಾರ್ಯದರ್ಶಿ ಧೀರಜ್ ಗೋಪಾಲ್ ಆಚಾರ್ಯ,ಜೊತೆ ಕಾರ್ಯದರ್ಶಿ ಸಹನಾವಿನಯರಾಜ್ ಕಯ್ಯಾರ್,ಕೋಶಾಧಿಕಾರಿ,ವೃಷಿಕೇಶ್ಆಚಾರ್ಯ,ಜೊತೆ ಕೋಶಾಧಿಕಾರಿ ಶ್ವೇತಾಪ್ರಶಾಂತ್ ಆಚಾರ್ಯ,ಮಾಜಿ ಅಧ್ಯಕ್ಷರುಗಳಾದ ಶೋಧನ್ ಆಚಾರ್ಯ,ಪ್ರತಿಭಾಶೋಧನ್ ಆಚಾರ್ಯ,ಅಶ್ವಿನಿಉಮೇಶ್ ಆಚಾರ್ಯ ಹಾಗೂ ಸಮಿತಿಯ ಎಲ್ಲಾ ಕಾರ್ಯಕಾರಿ ಸದಸ್ಯರು ಮತ್ತು ಸ್ವಯಂಸೇವಕರು ಸೇರಿ ಶಿವಾನಿಧೀರಜ್ ಆಚಾರ್ಯ ಮತ್ತು ಸಂಗಡಿಗರು ರಚಿಸಿದ ರಂಗೋಲಿಯ ದೀಪ ಪ್ರಜ್ವಲನೆ ಮಾಡುವುದರ ಮುಖೇನ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.ಪ್ರಶಾಂತ್ ಆಚಾರ್ಯ ಕುಂಟಿಕಾನ,ಶೃತಿ ಪ್ರವೀಣ್ ಆಚಾರ್,ವರುಣ್ ಆಚಾರ್ಯ,ಸುಚಿತ್ರ ದೇವಿಪ್ರಸಾದ್ ಆಚಾರ್ಯ, ಭವ್ಯ ರಾಕೇಶ್ ಹಾಗೂ ಉತ್ಸಾಹಿ ಭಜನಾ ತಂಡದೊಂದಿಗೆ ಭಜನೆ ಹಾಗೂ ಸಂತೋಷ್ ಆಚಾರ್ಯ ಮುದರಂಗಡಿ ಸಂಗಡಿಗರು ಮತ್ತು ಉತ್ಸಾಹಿ ಮಹಿಳೆಯರು ಪುಟಾಣಿ ಮಕ್ಕಳು ಒಟ್ಟಾಗಿ ಮಾಡಿದ ಕುಣಿತ ಭಜನೆ ಎಲ್ಲರನ್ನೂ ಮಂತ್ರ ಮುಗ್ದ ಗೊಳಿಸಿತು.

‘ಲಯ ಬ್ರಹ್ಮ-ಪ್ರಚಂಡ ಚೆಂಡೆ ಮದ್ದಳೆ ಮಾಂತ್ರಿಕ’ ಪ್ರಶಸ್ತಿ ಪ್ರದಾನ

ಮಧ್ಯಾಹ್ನದ ಮಹಾಪೂಜೆಯ ನಂತರ ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ರಾವ್ ರವರ‌ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಹಿಮ್ಮೇಳ ವಾದಕರು,ವಿಶ್ವ ವಿಖ್ಯಾತಿ ಪಡೆದಿರುವ ಹದಿ ಹರೆಯದ ಚೆಂಡೆ ಮದ್ದಳೆಯ ಚಾಣಕ್ಯರೆoದೇ ಖ್ಯಾತಿ ಪಡೆದ ಸವಿನಯ ನೆಲ್ಲಿತೀರ್ಥರವರಿಗೆ “ಲಯ ಬ್ರಹ್ಮ-ಪ್ರಚಂಡ ಚೆಂಡೆ ಮದ್ದಳೆ ಮಾಂತ್ರಿಕ” ಎಂಬ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಹಾಗೇನೇ ಮುಂಬೈ ಜೀ.ವಿ.ಸಿ ಯಾ ಅಧ್ಯಕ್ಷರಾದ ಸುರೇಶ್ ಆಚಾರ್ಯ ಅಲ್ಲದೆ ಇತರ ಮೂರು ಗಣ್ಯರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಖ್ಯಾತ ಮುಂಬೈಯ ವಾಸ್ತು ತಜ್ಞರಾದ ಅಶೋಕ್ ಪುರೋಹಿತರವರು ಉಪಸ್ಥಿತರಿದ್ದರು.

ಸುಮಂತ್ ಆಚಾರ್ಯ ನಡೆಸಿಕೊಟ್ಟ ಸಭಾ ಕಾರ್ಯಕ್ರಮದಲ್ಲಿ ಸಹನಾವಿನಯರಾಜ್ ಕಯ್ಯಾರ್ ಅವರು 23ನೇ ವಿಶ್ವಕರ್ಮ ಮಹೋತ್ಸವದ ವರದಿಯನ್ನು ವಾಚಿಸಿದರು,ಸ್ವಾತಿ ವಿವೇಕ್ ಆಚಾರ್ಯ ಅವರ ಧನ್ಯವಾದವಿತ್ತರು.

ಕೊನೆಗೆ ಶ್ವೇತಾಕಿರಣ್ ರಾವ್ ಹಾಗೂ ವಿಘ್ನೇಶ್ ಆಚಾರ್ಯರವರ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತಂಡಕ್ಕೂ ನೆನಪಿನ ಕಾಣಿಕೆ ಹಾಗೂ ಪುಟಾಣಿ ಮಕ್ಕಳಿಗೆ ಸರ್ಟಿಫಿಕೇಟ್ ನೀಡಿ ಪ್ರೋತ್ಸಾಹಿಸಲಾಯಿತ್ತು.