ಕಕ್ಯಪದವು: ಶ್ರೀರಾಮ ಗೆಳೆಯರ ಬಳಗದ ವತಿಯಿಂದ 14ನೇ ವರ್ಷದ ‘ಸತ್ಯ-ಧರ್ಮ’ ಜೋಡುಕರೆ ಕಂಬಳ

0
3

ಬಂಟ್ವಾಳ : ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ನ.28ರಂದು ಬೆಳಿಗ್ಗೆ 9 ಗಂಟೆಗೆ 14 ನೇ ವರ್ಷದ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ನಡೆಯಲಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳಕ್ಕೆ ಉದ್ಯಮಿ ರಾಜೇಂದ್ರ ಪೂಜಾರಿ ಕಕ್ಯಪದವು ಚಾಲನೆ ನೀಡುವರು. ಪ್ರಗತಿಪರ ಕೃಷಿಕ ರಾಮಯ್ಯ ಭಂಡಾರಿ ಪುಣ್ಕೆದಡಿ, ಸತೀಶ ಬಂಗೇರ, ತನಿಯಪ್ಪ ಗೌಡ ಪೆಂರ್ಗಾಲು, ದಾಮೋದರ ನಾಯಕ್ ಉಳಿ ಮತ್ತಿತರ ಗಣ್ಯರು ಭಾಗವಹಿಸುವರು.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಬಿ.ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ತಿಳಿಸಿದ್ದಾರೆ.