ಮೂಡುಬಿದಿರೆಯಲ್ಲಿ ನ. 30ರಂದು ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಸಮಾರಂಭ

0
8

ಮೂಡುಬಿದಿರೆ : ಕರಾವಳಿಯ ಗಂಡುಕಲೆ ಯಕ್ಷಗಾನದ ಉಳಿವು ಮತ್ತು ಬೆಳವಣಿಗೆಯ ಉದ್ದೇಶದಿಂದ ಓಂ ಶ್ರೀ ನಾಗಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಕಂಬಳಗುಡ್ಡೆ – ಕಾರ್ಕಳ ಇವರ ವತಿಯಿಂದ ನವೆಂಬರ್ 30ರಂದು ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಂಡಳಿಯ ಚಿಕ್ಕಮೇಳದ ಸೇವೆಯಾಟದ ಅಂಗವಾಗಿ ‘ಸುದರ್ಶನ ವಿಜಯ’ ಎಂಬ ಕಥಾಭಾಗವನ್ನು ಯಕ್ಷಗಾನ ಬಯಲಾಟದ ರೂಪದಲ್ಲಿ ಪ್ರದರ್ಶಿಸಲಾಗುವುದು. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸುವ ಸಲುವಾಗಿ ಸನ್ಮಾನ ಸಮಾರಂಭವೂ ನಡೆಯಲಿದೆ.

ನವೆಂಬರ್ 30ರಂದು ಸಂಜೆ 6 ಗಂಟೆಗೆ ಮೂಡುಬಿದಿರೆಯ ಹೌದಲ್‌ನ ಸಂಸ್ಕೃತಿ ಸುವರ್ಣ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ಜರುಗಲಿದೆ.

ಯಕ್ಷಗಾನ ಕಲೆಯ ಅಭಿಮಾನಿಗಳು, ಕಲಾಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ತನು, ಮನ ಹಾಗೂ ಧನದ ಸಹಕಾರ ನೀಡುವಂತೆ ಸಂಘಟಕರು ವಿನಂತಿಸಿದ್ದಾರೆ.

ಮೇಳದ ವ್ಯವಸ್ಥಾಪಕರಾಗಿ ಸಂತೋಷ್ ಶೆಟ್ಟಿ ಕಡ್ಡಳ, ಸಹಕಾರಿಯಾಗಿ ಸಂತೋಷ್ ಕೋಟೆಬಾಗಿಲು ಹಾಗೂ ಸಲಹೆಗಾರರಾಗಿ ಸುಧೀಶ್ ಪುತ್ತಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ಕಲೆಯ ಪ್ರೋತ್ಸಾಹ ಮತ್ತು ಕಲಾವಿದರ ಗೌರವದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ.