15 ಕೋಟಿ ವೆಚ್ಚದ ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆಯಿಂದ ಕುರ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

0
6

ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆ ಹೊಸೂರು ಶಾಲೆಯಿಂದ ಕುರ್ಪಾಡಿ ಗೋಳಿಹಕ್ಲು ಜಂಕ್ಷನ್ ವರೆಗೆ ಸುಮಾರು 15 ಕೋಟಿ ವೆಚ್ಚದಲ್ಲಿ ನಡೆಯಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ಗ್ರಾಮಾಂತರ ಭಾಗದ ಪ್ರಮುಖ ರಸ್ತೆಯಾಗಿರುವ ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ಈಗಾಗಲೇ ವಿಶೇಷ ಆದ್ಯತೆ ವಹಿಸಿ ಅನುದಾನ ಒದಗಿಸಲಾಗಿದ್ದು, ಈ ಕಾಮಗಾರಿ ಅತೀ ಶೀಘ್ರದಲ್ಲಿ ಪೂರ್ಣಗೊಂಡು ಉಡುಪಿ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಕಾಮಗಾರಿ ಸಂಪೂರ್ಣವಾಗಲಿದ್ದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಸ್ಥಳೀಯ ಪ್ರಮುಖರಾದ ಸುರೇಶ್ ಶೆಟ್ಟಿ ತಡಾಲ್, ಇನಕರ ಶೆಟ್ಟಿ ಕುಪ್ಪಾಳ, ಕಿರಣ್ ಶೆಟ್ಟಿ, ಸುಧಾ ಭಟ್, ವೆಂಕಟೇಶ್ ಕ್ರಮಧಾರಿ, ಜಯರಾಮ ಕ್ರಮಧಾರಿ, ರವಿರಾಜ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕಂಗಿಬೆಟ್ಟು, ನವೀನ್ ಪುತ್ರನ್, ಆದರ್ಶ ಶೆಟ್ಟಿ, ರಮಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ದೇವಾನಂದ, ಸುರೇಶ್ ಶೆಟ್ಟಿ ಕಂಗಿಬೆಟ್ಟು, ರಘು ನಾಯ್ಕ್ ,ಕೃಷ್ಣ ಪೂಜಾರಿ, ಬಾಲಕೃಷ್ಣ ಪೂಜಾರಿ, ಉಪೇಂದ್ರ, ಸತೀಶ್ ನಾಯಕ್, ರಾಘವೇಂದ್ರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.