ಮೂಲ್ಕಿ: ಫ್ರೆಂಡ್ಸ್ ಪಡುಪಣಂಬೂರು ಮತ್ತು ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಇದರ ಸಹಬಾಗಿತ್ವದಲ್ಲಿ ಹೊನಲು ಬೆಳಕಿನ ವಿಕಲಚೇತನ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಥಮ ವರ್ಷದ ಪುರುಷರ 65.ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ 2025 ಏ.05 ರಂದು ಕಾರ್ನಾಡ್ ಮೂಲ್ಕಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಏಪ್ರಿಲ್ 6 ರಂದು ಮೋಹನ್‌ದಾಸ್ ರೈ ಎರುಂಬು (ಸಾಮಾಜ ಸೇವಕರು, ಯಕ್ಷಗಾನ ಕಲಾವಿದರು, ಕ್ರೀಡಾಪಟು), ವಿಧ್ಯಾದರ್ ಮುಲ್ಕಿ ಠಾಣಾ ಅಧಿಕಾರಿ (ಆರಕ್ಷಕರು), ಅಲ್ಲಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೊ (ಕಂಬಳ ಕ್ಷೇತ್ರ), ಡಾ. ಕಾಂತಿ ಹರೀಶ್ (ಸಂಸ್ಥಾಪಕರು, ವಿಜೇತ ವಿಶೇಷ ಶಾಲೆ ಅಯ್ಯಪ್ಪ ನಗರ ಕಾರ್ಕಳ), ಕು. ಅಕ್ಷತ ಪೂಜಾರಿ (ವೈಟ್ ಅಪ್ಟಿಂಗ್)
ಶ್ರೀ ಶಶಾಂಕ್ ಆಚಾರ್ಯ (ಕಬಡ್ಡಿ ಕ್ಷೇತ್ರ), ಶ್ರೀ ಸುಶಾಂತ್ ಶೆಟ್ಟಿ (ಕಬಡ್ಡಿ ಕ್ಷೇತ್ರ)
ಶ್ರೀ ದಿನೇಶ್ ಕೋಟ್ಯಾನ್ (U+ Media) ಕಾರ್ನಾಡ್ ಮೂಲ್ಕಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.