Thursday, May 1, 2025
HomeUncategorizedಶನಿಗೋಚರದ ಆಧ್ಯಾತ್ಮಿಕ ಲಾಭ ಪಡೆಯಲು ಸಾಮೂಹಿಕ ಹನುಮಾನ ಚಾಲೀಸಾ ಪಠಣ;22 ಸಾವಿರಕ್ಕೂ ಅಧಿಕ ಹಿಂದೂಗಳ ಸಹಭಾಗ...

ಶನಿಗೋಚರದ ಆಧ್ಯಾತ್ಮಿಕ ಲಾಭ ಪಡೆಯಲು ಸಾಮೂಹಿಕ ಹನುಮಾನ ಚಾಲೀಸಾ ಪಠಣ;
22 ಸಾವಿರಕ್ಕೂ ಅಧಿಕ ಹಿಂದೂಗಳ ಸಹಭಾಗ !


29 ಮಾರ್ಚ್ 2025 ರಂದು ಶನಿಗೋಚರವಿತ್ತು, ಅಂದರೆ ಈ ದಿನ ಶ್ರೀಶನಿ ದೇವರು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದ್ದಾರೆ. ಈ ಶನಿ ಗೋಚರದಿಂದ ಭಕ್ತರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಲು ಹಾಗೂ ಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವ ಉದ್ದೇಶದಿಂದ ಸಂಪೂರ್ಣ ದೇಶದಲ್ಲಿ ಸಾಮೂಹಿಕ ಶ್ರೀಹನುಮಾನ ಚಾಲಿಸಾ ಪಠಣದ ಆಯೋಜನೆ ಮಾಡಲಾಗಿತ್ತು. ಪಠಣದ ಸಂದರ್ಭದಲ್ಲಿ ಶ್ರೀಹನುಮಂತ ಮತ್ತು ಶ್ರೀಶನಿದೇವರ ಚರಣಗಳಲ್ಲಿ ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಉಪಕ್ರಮದಲ್ಲಿ ಸಹಭಾಗಿಯಾಗಿರುವ ಅನೇಕ ಭಕ್ತರು ತಮ್ಮ ಆಧ್ಯಾತ್ಮಿಕ ಅನುಭೂತಿಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುತ್ತಾ ಈ ರೀತಿಯ ಆಯೋಜನೆಯಿಂದ ಶಕ್ತಿ ದೊರೆಯುತ್ತಿದೆಯೆಂದೂ ವ್ಯಕ್ತಪಡಿಸಿದರು.
ಈ ವೇಳೆ ಬೇರೆ ಬೇರೆ ಸ್ಥಳಗಳಲ್ಲಿರುವ ಶ್ರೀಹನುಮಂತನ ದೇವಸ್ಥಾನಗಳಲ್ಲಿ, ಶ್ರೀರಾಮ ದೇವಸ್ಥಾನಗಳು ಸೇರಿ ಸುಮಾರು 22 ಸಾವಿರಗಿಂತಲೂ ಹೆಚ್ಚಿನ ಭಕ್ತರು, ಸಾಧಕರು, ಮತ್ತು ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಈ ಪಠಣ ನಡೆಸಲಾಯಿತು. ಜಿಲ್ಲೆಯ 147 ಕ್ಕೂ ಸೇರಿ ಹಲವಾರು ಸಂಘಟನೆಯ ಪ್ರತಿನಿಧಿಗಳು, ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು ಹಾಗೂ ಬೇರೆ ಬೇರೆ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಗಳು ಉತ್ಸಾಹದಿಂದ ಭಾಗವಹಿಸಿದರು.

RELATED ARTICLES
- Advertisment -
Google search engine

Most Popular