ಹೆಜಮಾಡಿ ಕೋಡಿಕರೆ ಅಡ್ಕ ಗೀತಾ ಸದನ ನಿವಾಸಿ ಸವಿತಾ ಟಿ ಸಾಲಿಯಾನ್ (78) ಅಲ್ಪ ಕಾಲದ ಅಸೌಖ್ಯ ದಿಂದ ಏಪ್ರಿಲ್ 1ರಂದು ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಯನ್ನು ಅಗಲಿದ್ದಾರೆ. ಸರಳ ಹಾಗೂ ಸೌಮ್ಯ ಸ್ವಭಾವದ ಇವರು ಅಪಾರ ದೈವ ಭಕ್ತರಾಗಿದ್ದು, ಅಡ್ಕ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.