ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ 118ನೇ ಜನ್ಮ ದಿನೋತ್ಸವ – 118 ಮಕ್ಕಳಿಗೆ ನಾಮಕರಣ

0
177

ತುಮಕೂರು; ನಡೆದಾಡುವ ದೇವರು ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ 118ನೇ ಜನ್ಮ ದಿನೋತ್ಸವದಂದು ಶ್ರೀ ಸಿದ್ದಗಂಗಾ ಮಠದಲ್ಲಿ ಅವರ ಪುಣ್ಯ ಸ್ಮರಣೆಗಾಗಿ 118 ಮಕ್ಕಳಿಗೆ ಶ್ರೀಗಳ ಹೆಸರನ್ನು ನಾಮಾಂಕಿತಗೊಳಿಸುವ ನಾಮಕರಣ ಮಹೋತ್ಸವವು ಇಂದು ಶ್ರೀ ಸಿದ್ದಗಂಗಾ ಮಠದಲ್ಲಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಹಕಾರಿ ಸಚಿವರಾದ ಕೆ.ಏನ್ ರಾಜಣ್ಣನವರು ಆಗಮಿಸಿ 118 ಮಕ್ಕಳಿಗೆ ನಾಮಕರಣ ಮಾಡಿದಂತಹ ಪೋಷಕರನ್ನು ಉದ್ದೇಶಿಸಿ ನಡೆದಾಡುವ ದೇವರು ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಆಶೀರ್ವಾದ ಈ ಮಕ್ಕಳಿಗೂ ಮತ್ತು ಪೋಷಕರಿಗೂ ಲಭಿಸಿ ಜೀವನದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಬೆಳಕನ್ನು ಕೊಡುವ ಶ್ರೀ ಸಿದ್ದಗಂಗಾ ಕ್ಷೇತ್ರದ ಮಹಿಮೆ ಈ ನಾಡಿಗೆ ಬಹು ಅಪಾರವಾದದ್ದು ಹಾಗೂ ಅಪ್ರತಿಮವಾದದ್ದು ಅದೇ ರೀತಿ ಈ ನಾಮಕರಣ ಮಹೋತ್ಸವ ಕೂಡ ಅತಿ ವಿಶೇಷವಾದ ಹಾಗೂ ವಿನೂತನಗಳಲ್ಲಿ ವಿನೂತನವಾದ ಕಾರ್ಯಕ್ರಮ ಎಂದು ಈ ಕಾರ್ಯಕ್ರಮದಲ್ಲಿ ಆಗಮಿಸಿ ದಂತಹ 118 ಮಕ್ಕಳಿಗೂ ಅಕ್ಷತೆಯನ್ನು ಹಾಕಿ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಪುಣ್ಯಸ್ಮರಣೆಯನ್ನು ಮಾಡಿದರು.

ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿ ದಾಸೋಹ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಮಧುರ ಅಶೋಕ್ ಕುಮಾರ್ ಅವರು ಈ ಪುಣ್ಯಕ್ಷೇತ್ರದಲ್ಲಿ ಈ 118 ಮಕ್ಕಳಿಗೆ ಅವರ ನಾಮಾಂಕಿತದೊಡನೆ ಸಿಕ್ಕಂತಹ ಈ ಒಂದು ಪುಣ್ಯ ಬಹಳ ವಿಶೇಷವಾದದ್ದು ಎಂದು ಶ್ರೀಗಳ ಸ್ಮರಣೆಯನ್ನು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಡಿಷನಲ್ ರಿಜಿಸ್ಟರ್ ಆಫ್ ಕೋ ಆಪರೇಟಿವ್ ಸೊಸೈಟಿಸ್ ಆದ ಶ್ರೀಯುತ ಲಕ್ಷ್ಮಿ ಪತಯ್ಯನವರು ಸಭೆಯನ್ನು ಉದ್ದೇಶಿಸಿ ಸಿದ್ದಗಂಗಾ ಕ್ಷೇತ್ರವು ಅತಿ ತಪೋಶಕ್ತಿಯನ್ನು ಉಳ್ಳಂತಹ ಕ್ಷೇತ್ರವಾಗಿದ್ದು ಇಲ್ಲಿ ಲಭಿಸುವಂತಹ ಆಶೀರ್ವಾದವೂ ಇಡೀ ಮಕ್ಕಳಿಗೆ ಹೊಸ ಜೀವನಕ್ಕೆ ನಾಂದಿಯಾಗಲಿ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಲಭಿಸಲಿ ಎಂದು ಶ್ರೀಗಳ ಸ್ಮರಣೆಯನ್ನು ಮಾಡಿದರು.

ಟ್ರಸ್ಟ್ ನ ಕಾರ್ಯದರ್ಶಿಯಾದಂತಹ ಶ್ರೀಯುತ ಜಯಣ್ಣ ರವರು ಈ ಕಾರ್ಯಕ್ರಮ ಆಯೋಜನೆಯಲ್ಲಿ ಬಹಳ ಮುತುವರ್ಜಿ ವಹಿಸಿ ಈ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯಗಳನ್ನು ಶ್ರೀಗಳು ದಯಪಾಲಿಸಲಿ ಎಂದರು.

ಇದೇ ಸಂದರ್ಭದಲ್ಲಿ ರೈಲ್ವೆ ವಿಲ್ ಅಂಡ್ ಆಕ್ಸೆಲ್ ಎಂಪ್ಲೈಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಯುತ ರಮೇಶ್ ರವರು ಕಾರ್ಯಕ್ರಮವು ವಿನೂತನವಾದದ್ದು ವಿಶೇಷವಾದದ್ದು ಹಾಗೂ ಕರ್ನಾಟಕದಲ್ಲಿಯೇ ಇಂತಹ ಕಾರ್ಯಕ್ರಮ ಅತಿ ವಿಶೇಷವಾದ ಕಾರ್ಯಕ್ರಮ ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಅಪಾರವಾಗಿ ಸೇರಿದಂತಹ ನಾಮಕರಣಾರ್ತಿ ಪೋಷಕ ವರ್ಗವು ಮತ್ತು ಭಕ್ತ ವರ್ಗವು ಸನ್ಮಾನ್ಯ ಸಹಕಾರಿ ಸಚಿವರಾದಂತಹ ಶ್ರೀಯುತ ಕೆಎನ್ ರಾಜಣ್ಣನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಅಕ್ಷತೆಯನ್ನು ಹಾಕಿ ಶ್ರೀಗಳ ಸ್ಮರಣೆಯನ್ನು ಮಾಡಿದ್ದನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here