ಬಂಟ್ವಾಳ ತಾಲ್ಲೂಕಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಗಣಯಾಗ ಸಹಿತ ರಂಗಪೂಜೆ ಮತ್ತು ದೇವರ ಬಲಿ ಉತ್ಸವ ಮಂಗಳವಾರ ನಡೆಯಿತು. ಪ್ರಮುಖರಾದ ಎಂ.ಪದ್ಮರಾಜ ಬಲ್ಲಾಳ್, ರವಿಶಂಕರ ಶೆಟ್ಟಿ ಬಡಾಜೆ, ಅಶ್ವನಿ ಕುಮಾರ್ ರೈ, ಹರಿಶ್ಚಂದ್ರ ಪಕ್ಕಳ, ತಂತ್ರಿ ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ, ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ ಮತ್ತಿತರರು ಇದ್ದರು.