Thursday, April 24, 2025
HomeUncategorizedವಿಶ್ವ ಆಟಿಸಂ ದಿನಾಚರಣೆ

ವಿಶ್ವ ಆಟಿಸಂ ದಿನಾಚರಣೆ

ವಿಕಾಸಂ ಸೇವಾ ಫೌಂಡೇಶನ್,ಸಕ್ಷಮ ದ.ಕ.ಜಿಲ್ಲಾ ಘಟಕ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ.
ಮೇಲಿನ ಮೂರು ಸಂಸ್ಥೆಗಳ ಸಹಪ್ರಾಯೋಜಕ್ತ್ವದಲ್ಲಿ ವಿಶ್ವ ಆಟಿಸಂ ದಿನಾಚರಣೆಯನ್ನು ಲಯನ್ಸ್ ಸೇವಾ ಮಂದಿರ ಬಂಟ್ವಾಳ. ಅರ್ಥಪೂರ್ಣವಾಗಿ ನಡೆಸಲಾಯಿತು.
ವಿಟ್ಲ ಸರಕಾರಿ ಕಾಲೇಜಿನ ಮಕ್ಕಳು ಆಟಿಸಂ ಬಗ್ಗೆ ಬೀದಿನಾಟಕವನ್ನು ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರ್ಥನೆ ಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು.ವಿಕಾಸಂ ಸಂಸ್ಥೆ ಯ ನಿರ್ದೇಶಕ ರಾದ ಧರ್ಮ ಪ್ರಸಾದ್ ರೈ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಾಕರಾದ ಗಣೇಶ ಭಟ್ಟ ವಾರಣಾಸಿ ಪ್ರಸ್ತಾವನೆ ಯ ಮೂಲಕ ಕಾರ್ಯಕ್ರಮ ದ ಉದ್ದೇಶ ವನ್ನು ತಿಳಿಸಿದರು.ದೀಪ ಪ್ರಜ್ವಲನೆಯೊಂದಿಗೆ ಸಭೆ ಮುನ್ನ ಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಲ/ ರಾಧಾಕೃಷ್ಣ ಬಂಟ್ವಾಳ್ ನಿರ್ವಹಿಸಿ ಮಾತನಾಡುತ್ತಾ ನಿಸ್ವಾರ್ಥವಾಗಿ ನಿಶುಲ್ಕದೊಂದಿಗೆ ಕೆಲಸ ಮಾಡುತ್ತಿರುವ ವಿಕಾಸ ಸಂಸ್ಥೆಯೊಂದಿಗೆ ಸಹಕರಿಸುವುದಾಗಿ ತಿಳಿಸಿದರು.
ಝೋನಲ್ ಕಮಿಷನರ್ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಬಂಟ್ವಾಳ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಗಳಾದ ಶ್ರೀಮತಿ ರೇಖಾ ಜೆ ಶೆಟ್ಟಿ ಯವರು ಆಟಿಸಂ ದಿನಾಚರಣೆಗೆ ಶುಭಕೋರಿದರು.ಶ್ರೀಮತಿ ಮಮ್ತಾಝ್ ಸಿಡಿಪಿಒ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು  ಅಂಗನವಾಡಿ ಕಾರ್ಯ ಕರ್ತೆಯರು ದಿವ್ಯಾಂಗ ಮಕ್ಕಳನ್ನು  ಗುರುತಿಸುವಲ್ಲಿ  ಹೇಗೆ ಸಹಕರಿಸಿತ್ತಿದೆ ಎಂಬ ಮಾಹಿತಿ ನೀಡಿದರು.ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧ ಕಟ್ಟೆಯ ಪ್ರಾಂಶುಪಾಲರೂ ಸಾಹಿತಿಗಳೂ ಆಗಿರುವ ಡಾ.ಅಜಕ್ಕಳ ಗಿರೀಶ ಭಟ್ಟರು ಉದ್ಘಾಟನಾ ಕಾರ್ಯ ನಡೆಸಿ ತಾನೂ ಜನಜಾಗೃತಿ ಮೂಡಿಸುವ ಇಂಥಹ ಕಾರ್ಯಗಳಿಗೆ ಕೈಜೋಡಿಸುವುದಾಗಿ ಹೇಳಿ  ಶ್ಲಾಘಿಸಿದರು.ಸಕ್ಷಮ ದಕ ಜಿಲ್ಲಾ ಘಟಕಾಧ್ಯಕ್ಷರಾದ ರಾಜಶೇಖರ ಭಟ್ ಕಾಕುಂಜೆಯವರು ದಿವ್ಯಾಂಗ ಮಕ್ಕಳ ಸಬಲೀಕರಣಕ್ಕೆ ಮಕ್ಕಳು, ಪೋಷಕರು,ಶಿಕ್ಷಕರು ಹೇಗೆ,ಯಾಕೆ ಸಮಾಜದಲ್ಲಿ ಅರಿವನ್ನು ಮೂಡಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿದ್ದ ಸರಕಾರಿ ಪ್ರಥಮದರ್ಜೆ ಕಾಲೇಜು ವಿಟ್ಲ ದ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ರಾದ ಶ್ರೀ ಪ್ರಸನ್ನ ಕುಮಾರ್, ಸರಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವಿನ  ಸಮಾಜಕಾರ್ಯ ಪದವಿ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಸಿ ಆರ್ ಶುಭಹಾರೈಸಿದರು.
ರೋಟರೀಕ್ಲಬ್ ಬಂಟ್ವಾಳ ಟೌನಿನ ಕಾರ್ಯ ದರ್ಶಿಗಳಾದ ರೋ.ನಾರಾಯಣ ಸಿ ಪೆರ್ನೆ ಹಾಜರಿದ್ದರು.
ವಿಕಾಸಂ ಸೇವಾ ಫೌಂಡೇಶನ್ನಿನ ಸ್ಥಾಪಕ ನಿರ್ದೇಶಕ ರಲ್ಲೊಬ್ಬರಾದ ಧರ್ಮ ಪ್ರಸಾದ್ ರೈ ಯವರುಸಂಸ್ಥೆ ಯ ದಿವ್ಯಾಂಗ ಮಕ್ಕಳು ತಯಾರಿಸಿ ದ ಚಿತ್ರ ವನ್ನು ವೇದಿಕೆ ಯಲ್ಲಿದ್ದ ಗಣ್ಯರಿಗೆ ವಿತರಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಕ್ಷಮ ದಕ ಜಿಲ್ಲಾ ಘಟಕದಿಂದ ಒಂದು ಲರ್ನಿಂಗ್ ಏಡ್ ಕಿಟ್ಟನ್ನು ವಿಕಾಸಂ ಸೇವಾ ಫೌಂಡೇಶನ್ನಿನ ನಿರ್ದೇಶಕ ಹಾಗೂ ಕಾರ್ಯ ನಿರ್ವಾಹಕರಿಗೆ ಗಣ್ಯ ಸಮ್ಮುಖದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 175 MSW ಮತ್ತು BEd ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಸೇರಿದ ವಿಧ್ಯಾರ್ಥಿ ಮತ್ತು ಶಿಕ್ಷಕ ವೃಂದಕ್ಕೆ  ಆಟಿಸಂ ಮತ್ತು 21ಬಗೆಯ ದಿವ್ಯಾಂಗತಯ ಬಗ್ಗೆ ಮಾಹಿತಿ ಶಿಬಿರವನ್ನು ನಡೆಸಲಾಯಿತು. ವಿಕಾಸಂ ಸೇವಾ ಫೌಂಡೇಶನ್ ಬಂಟ್ವಾಳ ದ ಆಡಳಿತ ನಿರ್ದೇಶಕ ರೂ ಸಂಪನ್ಮೂಲ ವ್ಯಕ್ತಿ ಗಳೂ ಆದ ವಾರಣಾಸಿ ಗಣೇಶ ಭಟ್ಟರು   “ಆಟಿಸಂ”ಬಗ್ಗೆ ಮಾಹಿತಿ ಹಂಚಿಕೊಂಡರು.ಬಳಿಕ “ಸಕ್ಷಮ”ದ.ಕ ಜಿಲ್ಲಾ ಘಟಕದ ಅಧ್ಯಕ್ಷ ರಾದ ರಾಜಶೇಖರ ಭಟ್ ಕಾಕುಂಜೆಯವರು ಸರಕಾರ ದಿಂದ ಗುರುತಿಸಲ್ಪಟ್ಟ 21ಬಗೆಯ ದಿವ್ಯಾಂಗತೆ ಬಗ್ಗೆ ಸಮಗ್ರ ಮಾಹಿತಿ ಯನ್ನು ನೀಡಿದರು. ವಾಮದಪದವು ಮತ್ತುವಿಟ್ಲ ಸರಕಾರಿ ಪ್ರೌಢಶಾಲೆಯ ಹಾಗೂ ಸಂತ ಅಲೋಶಿಯಸ್ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳು,ಪ್ರಾಧ್ಯಾಪಕರು,ಶಿಕ್ಷಕರು ಕಾರ್ಯಕ್ರಮ ದ ಫಲಾನುಭವಿಗಳಾಗಿದ್ದರು.
ಸಕ್ಷಮ ದಕ ಜಿಲ್ಲಾ ಘಟಕದ ಕಾರ್ಯ ದರ್ಶಿ ಹರೀಶ್ ಪ್ರಭು,ಕೋಶಾಧಿಕಾರಿ ಸತೀಶ್ ರಾವ್,ಮಹಿಳಾ ವಿಭಾಗದ ಗೀತಾ ಲಕ್ಷ್ಮೀಶ್ ,ಸಹಕಾರ್ಯದರ್ಶಿ ಭಾಸ್ಕರ ಹೊಸಮನೆ ಜೊತೆಗಿದ್ದರು.

RELATED ARTICLES
- Advertisment -
Google search engine

Most Popular