ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0
260


ಉಡುಪಿ: ಹಲವಾರು ವರ್ಷಗಳಿಂದ ದೇವಸ್ಥಾನದ ಜೀರ್ಣೋ ದ್ಧಾರ ಕಾರ್ಯ ನಡೆಸಬೇಕೆಂದು ಸಂಕಲ್ಪ ಮಾಡಿದರೂ, ಸಮಯ ಕೂಡಿ ಬಂದಿರಲಿಲ್ಲ. ಆದರೆ ಕಳೆದ ವರ್ಷ ಕಾಮಗಾರಿಗೆ ಚಾಲನೆ ದೊರಕಿರುವುದು ದೇವರ ಇಚ್ಛೆಯೇ ಆಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ’ ಉಪಾಧ್ಯಾಯ ಅಭಿಪ್ರಾಯಪಟ್ಟರು.

ಪರ್ಕಳ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಡೆಯ ಮಹಾಲಿಂಗೇಶ್ವರ ನೊಂದಿಗೆ ಸೇರಿ ಜೀರ್ಣೋದ್ದಾರ ಕಾರ್ಯವನ್ನು ಸುಸೂತ್ರವಾಗಿ ನಡೆಸಿ ಕೊಡುವ ವಾಗ್ದಾನವಿತ್ತ ಹುಲಿ ಚಾವುಂಡಿ ದೈವದ ಕೃಪೆ ಇಲ್ಲಿ ವಿಶೇಷವಾಗಿರುವುದನ್ನು ನೆನಪಿಸಿಕೊಂಡರು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ. ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಮದಾಸ್ ಹೆಗ್ಡೆ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕಾರ್ಯದರ್ಶಿ ರವೀಂದ್ರ ಆಚಾರ್ಯ, ಕೋಶಾಧಿಕಾರಿ ಸುಮಿತ್ರಾ ನಾಯಕ್, ಪ್ರಚಾರ ಸಮಿತಿ ಸಂಚಾಲಕ ಅಕ್ಷಯ್ ಬಂಗೇರ 1 ಉಪಾಧ್ಯಕ್ಷಮೋಹನ್ ದಾಸ್ ನಾಯಕ್, ಗಣೇಶ್ ಪಾಟೀಲ್, ಕೆ.ಭಾಸ್ಕರ, ನಾರಾಯಣ ಉಪಾಧ್ಯಾಯ, ಸುಧಾಕರ ಪೂಜಾರಿ, ಜಯಕರಶೆಟ್ಟಿಗಾರ್, ಜಯಕರ ಶೇರಿಗಾರ್, ರಂಜಿತ್ ಶೆಟ್ಟಿ ಸಂತೋಷ್ ಆಚಾ‌ರ್, ಉಮೇಶ್ ನಾಯಕ್, ರಮ್ಯಾ ನಾಯಕ್, ಸುಧೀರ್ ಶೆಟ್ಟಿ ಗಣೇಶ್ ಶೇರಿಗಾರ್, ಮಂಜುನಾಥ್ ಪ್ರಭು, ನಾಗೇಶ ಪ್ರಭು, ಸುಂದರ ಶೆಟ್ಟಿಗಾ‌ರ್, ಸದಸ್ಯರಾದ ಮುರಳೀಧರ ನಕ್ಷತ್ರಿ, ಸತೀಶ್ ನಾಯ್, ಕೀರ್ತಿ ಕುಮಾ‌ರ್, ಸುಗುಣಾ ನಾಯ್, ಉಪೇಂದ್ರ ಬಾಯರಿ, ಪದ್ಮನಾಭ, ಗ್ರಾಮಸ್ಥರು ಉಪಸ್ಥಿತರಿದ್ದರು. ಸುಖಾನಂದ ಶೆಟ್ಟಿಗಾರ್ ಸ್ವಾಗತಿಸಿ, ಕೆ. ಶಿವರಾಮ ಶೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here