ನಿರಂತರ ವೈಶಿಷ್ಠಪೂರ್ಣ ಕಾರ್ಯಕ್ರಮಗಳ ಮೂಲಕ ಜನಪರ ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕಾರ್ಕಳ ತಾಲೂಕಿನ ಬೋಳ ಮೈಂದ್ಕಲ್ ನಿವಾಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಮತಿ ಕೊರಗ ಮೂಲ್ಯ ದಂಪತಿಗಳಿಗೆ ನೂತನ ಮನೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವು ನಂದಳಿಕೆ ಪಾರ್ಲ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಅಬ್ಬನಡ್ಕ ಗೃಹ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಇನ್ನಾ ಪ್ರೇಮ್ ಕುಲಾಲ್ ನೂತನ ಮನೆಗೆ ಶಿಲಾನ್ಯಾಸಗೈದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮರಿಮಾರಗುತ್ತು ಅವಿನಾಶ್ ಮಲ್ಲಿ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಅಂಚನ್, ಬೆಳ್ಮಣ್ಣು ಕುಂಭನಿಧಿ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಇನ್ನಾ ಕುಶ ಆರ್. ಮೂಲ್ಯ, ಉಪಾಧ್ಯಕ್ಷರಾದ ಬೆಳ್ಮಣ್ಣು ಜಗನ್ನಾಥ್ ಮೂಲ್ಯ, ನಿರ್ದೇಶಕರಾದ ದೀಪಕ್ ಕುಲಾಲ್, ಕೆದಿಂಜೆ ಸ್ಕಂದ ಜನರಲ್ ಸ್ಟೋರ್ ಮಾಲಕರಾದ ಕೇಶವ ಪೂಜಾರಿ, ಸಮಾಜ ಸೇವಕಿ ಬೆಳ್ಮಣ್ಣು ಅನಿತಾ ಡಿಸೋಜಾ, ಉದ್ಯಮಿ ಬೋಳಪದವು ಗಣೇಶ್ ಕುಲಾಲ್, ಶಂಕರ ಮೂಲ್ಯ, ನಿಟ್ಟೆ ಮಾತೃಜಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಅಬ್ಬನಡ್ಕ ಸದಾಶಿವ ಪುತ್ರನ್, ಮೈಂದ್ಕಲ್ ನಾರಾಯಣ ಪೂಜಾರಿ, ಬೋಳ ಬಿ.ಎಸ್. ರವಿ ಆಚಾರ್ಯ, ವಿಜಯ ಕುಲಾಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಗೃಹ ನಿರ್ಮಾಣ ಸಮಿತಿಯ ಸಂತೋಷ್ ಕುಲಾಲ್ ಇನ್ನಾ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಮಂಜುನಾಥ್ ಆಚಾರ್ಯ, ಸುರೇಶ್ ಅಬ್ಬನಡ್ಕ, ಹರಿಣಿ ಪೂಜಾರಿ, ಅಶ್ವಿನಿ ಪ್ರಭಾಕರ್, ವೀಣಾ ಆಚಾರ್ಯ, ಪ್ರದೀಪ್ ಸುವರ್ಣ ಕೆಮ್ಮಣ್ಣು ಮೊದಲಾದವರಿದ್ದರು.