ಕ್ಯಾನ್ಸರ್‌ಗೆ ತುತ್ತಾದ 13 ವರ್ಷ ಬಾಲಕಿ ಮೇಲೆ ಎರಗಿದ ಕಾಮುಕ, ಏನೂ ಅರಿಯದ ಬಾಲೆ ಪ್ರೆಗ್ಮೆಂಟ್

0
871

ಮುಂಬೈ: ಭಾರತದಲ್ಲಿ ಮಹಿಳೆ, ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮುಂಬೈನ ಥಾಣೆ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಮನಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ.
13 ವರ್ಷದ ಬಾಲಕಿ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಿಮೋಥೆರಪಿ ಚಿಕಿತ್ಸೆ ನಡುವೆ ಕಾಮುಕನೊಬ್ಬ ಈ ಬಾಲಕಿ ಮೇಲೆ ಏರಗಿದ್ದಾನೆ. 13 ವರ್ಷದ ಬಾಲಕಿ ಈಗ ಪ್ರಗ್ನೆಂಟ್. ಇತ್ತ ಕಾಮುಕ ಅರೆಸ್ಟ್ ಆಗಿದ್ದಾನೆ. ಆದರೆ ಆಟವಾಡಬೇಕಿದ್ದ ಬಾಲಕಿಗೆ ಕ್ಯಾನ್ಸರ್ ಆಘಾತದ ಜೊತೆಗೆ ಕಾಮುಕ ಅಟ್ಟಹಾಸ ಜೀವನವನ್ನೇ ಚಿಂದಿ ಮಾಡಿದೆ.

ಆರೋಪಿಯ ಬಾಡಿಗೆ ಮನೆಯಲ್ಲಿ ಬಾಲಕಿ ಕುಟುಂಬ ವಾಸವಿತ್ತು. ಕ್ಯಾನ್ಸರ್ ಚಿಕಿತ್ಸೆಗಾಗಿ ಪದೇ ಪದೇ ಆಸ್ಪತ್ರೆ ತೆರಳಬೇಕಿದ್ದ ಕಾರಣ ಬಾಲಕಿ ಕುಟುಂಬ ಇತ್ತೀಚೆಗಷ್ಟೇ ಆರೋಪಿಯ ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದರು. ಬಾಲಕಿ ಪೋಷಕರು ಇಬ್ಬರು ಮನೆಯಲ್ಲಿ ಇಲ್ಲದ ವೇಳೆ ಆರೋಪಿ ಬಾಲಕಿಯ ಮೇಲೆ ಎರಗಿದ್ದಾನೆ. ಬಳಿಕ ಈ ವಿಚಾರ ಬಾಯಿಬಿಟ್ಟರೆ ಪೋಷಕರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ.
ಬಾಲಕಿಗೆ ಹಂತ ಹಂತದ ಕ್ಯಾನ್ಸರ್ ಚಿಕಿತ್ಸೆ ನಡೆಯುತ್ತಿತ್ತು. ಒಂದರೆಡು ತಿಂಗಳ ಬಳಿಕ ಕೀಮೋಥರಪಿ ಆರಂಭಗೊಂಡಿತ್ತು. ಇದಕ್ಕಾಗಿ ಮುಂಬೈನ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದ್ದರು. ವೈದ್ಯರ ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಅನ್ನೋದು ಪತ್ತೆಯಾಗಿದೆ. ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರ ತಂಡ ಬಾಲಕಿಗೆ ಕೌನ್ಸಿಲಿಂಗ್ ಮಾಡಿದಾಗ ನಡೆದ ಘಟನೆ ತಿಳಿದಿದೆ.


ಬಾಲಕಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಅನುಕೂಲಕರ ಬಾಡಿಗೆ ಮನೆ ಹುಡುಕುತ್ತಿದ್ದ ವೇಳೆ ಆರೋಪಿ ನೆರವಿನ ಹಸ್ತ ಚಾಚಿದ್ದಾನೆ.ತಮ್ಮ ಬಾಡಿಗೆ ಮನೆಯನ್ನು ಕಡಿಮೆ ಮೊತ್ತಕ್ಕೆ ನೀಡುವುದಾಗಿ ಹೇಳಿದ್ದಾನೆ. ಮೊದಲೇ ಸಂಕಷ್ಟದಲ್ಲಿದ್ದ ಪೋಷಕರು ಸಮಾಧಾನದಿಂದ ಬಾಡಿಗೆ ಮನೆಗೆ ಆಗಮಿಸಿದ್ದಾರೆ. ಆದರೆ ನೆರವಿನ ನಾಟಕವಾಡಿದ ಆರೋಪಿ ಬಾಲಕಿ ಮೇಲೆರಗಿ ಗರ್ಭಿಣಿ ಮಾಡಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಕಂಗಾಲಾಗಿದ್ದಾರೆ. ಆಸ್ಪತ್ರೆ ವೈದ್ಯರ ತಂಡ ಪೋಷಕರ ಸಮಾಧಾನ ಮಾಡಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಇದರಂತೆ ಪೋಷಕರು ದೂರು ನೀಡಿದ್ದಾರೆ. ಇತ್ತ ಪೊಲೀಸರು ಮಾಹಿತಿ ಪಡೆದು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಬಳಿಕ 29 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿ ವಿರುದ್ಧ ಪೋಕ್ಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here