ಬಂಟ್ವಾಳ ತಾಲ್ಲೂಕಿನ ಶಂಭೂರು ಗ್ರಾಮದ ದಿಂಡಿಕೆರೆ ಜೋಡುಸ್ಥಾನದಲ್ಲಿ ವೈದ್ಯನಾಥ ನೇಮೋತ್ಸವ ಮತ್ತು ಕಂಚಿಲು ಸೇವೆ ಹಾಗೂ ಜುಮಾದಿ ಬಂಟ ದೈವಗಳ ನೇಮೋತ್ಸವ ಈಚೆಗೆ ನೆರವೇರಿತು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಕೋಟ್ಯಾನ್, ಗೌರವಾಧ್ಯಕ್ಷ ಸೀತಾರಾಮ ಎನ್., ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ ಪ್ರಸಾದ್ ಮತ್ತಿತರರು ಇದ್ದರು.