ಭದ್ರಗಿರಿ: ಶ್ರೀ ಹನುಮಂತ ದೇವರಿಗೆ ರಜತ ಕವಚ ಸಮರ್ಪಣೆ

0
104

 ದಕ್ಷಿಣ ಪಂಢರಾಪುರ ಖ್ಯಾತಿಯ ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿರುವ ಒಂದು ಕೈಯಲ್ಲಿ ತಂಬೂರಿ ಮತ್ತೊಂದು ಕೈಯಲ್ಲಿ ಚಿಟಿಕೆ ಹಿಡಿದಿರುವ ಅಪರೂಪದ ಶ್ರೀ ಹನುಮಂತ ದೇವರ ವಿಗ್ರಹಕ್ಕೆ ಶ್ರೀ ಹನುಮಜ್ಜಯಂತಿಯ ಪರ್ವದಿನದಂದು ಭಕ್ತಾದಿಗಳ ವತಿಯಿಂದ ನೂತನ ರಜತ ಕವಚ ಸಮರ್ಪಣೆ ಆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ಟರು ಆಡಳಿತ ಮೊಕ್ತೇಸರರಾದ  ಭದ್ರಗಿರಿ ಪಾಂಡುರಂಗ ಆಚಾರ್ಯ , ಅರ್ಚಕರಾದ ಸದಾನಂದ ಆಚಾರ್ಯ, ದಾನಿಗಳಾದ ಪ್ರಭಾಕರ ಭಟ್, ಸುಧೀರ ಭಟ್, ಕೆ.ಸಿ ಪ್ರಭು, ಬಿ ವಿಠ್ಠಲ ಆಚಾರ್ಯ ಗಣೇಶ್ ಜಿ ಪೈ  ಮತ್ತು   ವಿಶ್ವಸ್ತ ಮಂಡಳಿಯ ಸದಸ್ಯರು ಹಾಗೂ  ಭಕ್ತಾದಿಗಳು  ಭಾಗವಹಿಸಿದ್ದರು .ಭದ್ರಗಿರಿ ಶ್ರೀ ವೀರವಿಠ್ಠಲ ಭಜನಾ ಮಂಡಳಿಯ ವತಿಯಿಂದ  ಭಜನಾ ಸೇವೆ ನಡೆಯಿತು.

LEAVE A REPLY

Please enter your comment!
Please enter your name here